ಶಾಸಕ ಜಮೀರ್ ಅಹ್ಮದ್ ಖಾನ್‌ಗೆ ಕೊರೊನಾ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಇದೀಗ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್‌ಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ

ಸ್ವತಃ ಟ್ವೀಟ್ ಮಾಡಿರುವ ಜಮೀರ್ ಅಹ್ಮದ್, ಸಣ್ಣ ಪ್ರಮಾಣದಲ್ಲಿ ಜ್ವರ ಕಾಣಿಸಿಕೊಂಡ ಹಿನ್ನೆಲೆ, ಕೊರೊನಾ ಸೋಂಕು ಟೆಸ್ಟ್ ಮಾಡಿಸಿದ್ದೆ. ವರದಿಯಲ್ಲಿ ಧೃಡಪಟ್ಟಿದೆ. ಹೀಗಾಗಿ ವೈದ್ಯರ ಸಲಹೆ ಮೇರೆಗೆ ನಾನು ಕೆಲವು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತೇನೆ ಎಂದು ತಿಳಿಸಿದ್ದಾರೆ. ಅಲ್ಲದೇ ತನ್ನ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದವರು ಸೋಂಕು ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಇತ್ತೀಚಗಷ್ಟೇ ಶಾಸಕ ಜಮೀರ್ ಅಹ್ಮದ್ ಡಿ.ಜೆ ಹಳ್ಳಿಗೆ ಭೇಟಿ ನೀಡಿದ್ದರು.

 
 
 
 
 
 
 
 
 

Leave a Reply