ಶವ ಅದಲು ಬದಲು

ಕುಂದಾಪುರ: ನೇರಂಬಳ್ಳಿ ವಯೋವೃದ್ಧರು ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಕರೊನಾ ದಿಂದ ಮೃತಪಟ್ಟಿದ್ದು, ಕುಂದಾಪುರ ಹಳೆ ಕೋಟೆ ಸ್ಮಶಾನದಲ್ಲಿ ಪ್ಯಾಕ್ ಮಾಡಿದ ಬಾಡಿ ಬಿಡಿಸಿದಾಗ ಬೇರೊಬ್ಬರ ಶವ ನೋಡಿ ಕುಟುಂಬಸ್ಥರು ಕಂಗಾಲಾದ ಘಟನೆ ನಡೆದಿದೆ.

ನೇರಂಬಳ್ಳಿ ಮೂಲಕ 60 ವರ್ಷದ ವೃದ್ಧರು ಕರೊನಾ ಸೋಂಕಿನಿಂದಾಗಿ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿ ದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಶವವನ್ನು ಅಂಬುಲೆನ್ಸ್ನಲ್ಲಿ ಕುಂದಾಪುರಕ್ಕೆ ತರಲಾಗಿತ್ತು.

ಶವ ಪ್ಯಾಕ್ ಮಾಡಿದ್ದರಿಂದ ಒಳಗಿರುವ ಶವ ಯಾರದ್ದೆಂದು ಸಂಬಂಧಿಕರಿಗೆ ತಿಳಿಯಲಿಲ್ಲ. ಹಳೆಕೋಟೆ ಸ್ಮಶಾನಕ್ಕೆ ಅಂತ್ಯ ಸಂಸ್ಕಾರಕ್ಕೆ ತಂದಾಗ ಶವ ಸುತ್ತಿದ ಪ್ಯಾಕ್ ಬಿಡಿಸಿದಾಗ ವಯೋವೃದ್ಧರ ಶವದ ಬದಲು ಯುವಕನ ಶವ ಇತ್ತು.

ಇದರಿಂದ ಕುಪಿತರಾದ ಜನ ಆಂಲುಲೆನ್ಸ್ ಚಾಲಕನ ತರಾಟೆಗೆ ತೆಗೆದುಕೊಂಡಿದ್ದಾರೆ. ಜನ ಸ್ಮಶಾನದಲ್ಲಿ ಸೇರಿ ಪ್ರತಿಭಟನೆ ನಡೆಸು ತ್ತಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ.

ಸ್ಮಶಾನದಲ್ಲಿ ನೂರಾರು ಮಂದಿ ಆಗಮಿ ಸಿದ್ದು, ಅಸಮಧಾನ ವ್ಯಕ್ತಪಡಿಸಿದ್ದಾರೆ. ತಾಲೂಕು ಅರೋಗ್ಯಾಧಿಕಾರಿ ನಾಗ ಭೂಷಣ್, ಸಹಾಯಕ ಆಯುಕ್ತ ರಾಜು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಘಟನೆಯ ನಂತರ ನೇರಂಬಳ್ಳಿ ನಿವಾಸಿಯ ಮೃತದೇಹವನ್ನು ಸ್ಮಶಾನಕ್ಕೆ ತರಲಾಯಿತು. ಸ್ಮಶಾನದಲ್ಲಿ ಮನೆಯವರ ಎದುರಿಗೆ ಪರೀಕ್ಷೆ ನಡೆಸಿದ ನಂತರ ಅಂತ್ಯಸಂಸ್ಕಾರ ನಡೆಸ ಲಾಯಿತು.

 
 
 
 
 
 
 
 
 
 
 

Leave a Reply