ವಿದ್ಯುತ್ ದರ ಏರಿಕೆ ಜನಸಾಮಾನ್ಯರ ಮೇಲೆ ಹೊಡೆತ~ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೆಲಿಯೋ

ಉಡುಪಿ: ಕೋವಿಡ್ ನ ದೊಡ್ಡ ಹೊಡೆತ ದಿಂದ ಹೊರಬರಲು ಕಷ್ಟಪಡುತ್ತಿರುವ ಬಡಜನರ ಮೇಲೆ ರಾಜ್ಯ ಸರಕಾರದ ವಿದ್ಯುತ್ ದರ ಏರಿಕೆ ಇನ್ನೊಂದು ಹೊಡೆತ ವಾಗಿದ್ದು ಜನಸಾಮಾನ್ಯರನ್ನು ಕಂಗೆಡುವಂತೆ ಮಾಡಿದೆ ಎಂದು ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೆಲಿಯೋ ಹೇಳಿದ್ದಾರೆ.


ಈಗಾಗಲೇ ಅನೇಕ ತಿಂಗಳುಗಳಿಂದ ಕೆಲಸವಿಲ್ಲದೆ ಮೂರು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿರುವ ಈ ಸಂದರ್ಭದಲ್ಲಿ ಸರಕಾರದ ಬೆಲೆ ಏರಿಕೆಯ ವಿಚಾರಗಳು ಜನರನ್ನು ಸಂಪೂರ್ಣವಾಗಿ ಕುಸಿಯುವಂತೆ ಮಾಡಿದೆ. ಅಂತರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಕಚ್ಚಾ ತೈಲ ಬೆಲೆ ಅತೀ ಕಡಿಮೆಯಾಗಿ ಬ್ಯಾರಲಿಗೆ 38 ಡಾಲರಿದೆ ( ಮನಮೋಹನ್ ಸಿಂಗ್ ಸರಕಾರದ ಸಂದರ್ಭದಲ್ಲಿ ಅದು 150 ಡಾಲರಿಗೆ ತಲುಪಿತ್ತು)ಆದರೂ ಬೆಲೆ ಏರಿಕೆ ನಡೆಯುತ್ತಿದೆ.

ನೀರುಳ್ಳಿಯ ಬೆಲೆ ಮಾರುಕಟ್ಟಯಲ್ಲಿ 100 ರೂಪಾಯಿಗಿಂತಲೂ ಅಧಿಕವಾಗಿದ್ದರೂ ಮೋದಿ ಸರಕಾರ ಮೌನ ವಹಿಸಿದೆ. ಬ್ಯಾಂಕು ಗಳಲ್ಲಿ ಇಷ್ಟು ವರ್ಷ ವ್ಯವಹಾರ ಗಳಿಗೆ ಯಾವುದೇ ಶುಲ್ಕವಿರಲಿಲ್ಲ ಆದರೆ ಬಿಜೆಪ ನೇತೃತ್ವದ ಮೋದಿ ಸರಕಾರ ಅದಕ್ಕೂ ಶುಲ್ಕ ವಿಧಿಸಲು ಆರಂಭಿಸಿದೆ.

ಕಾರ್ಮಿಕರಿಂದ ವಸೂಲಿ ಮಾಡಿದ ಇ ಎಸ್ ಐ ಹಣವನ್ನು ಆಸ್ಪತ್ರೆಗಳಿಗೆ ಪಾವತಿಸದೆ ಕಾರ್ಮಿಕರನ್ನು ವಂಚನೆ ಮಾಡುತ್ತಿದೆ.
ಇಡೀ ದೇಶದಲ್ಲಿ ಅನೇಕ ಯುವಕರು ಮಹಿಳೆ ಯರು, ಕೂಲಿ ಕಾರ್ಮಿಕರು ಕೆಲಸವನ್ನು ಕಳೆದುಕೊಂಡು ಮನೆಯಲ್ಲಿ ದ್ದಾರೆ. ಇನ್ನೊಂ ದೆಡೆ ಈಗಾಗಲೇ ಮಾಡಿದ ಬ್ಯಾಂಕ್ ಸಾಲ ವನ್ನು ಮರು ಪಾವತಿಸುವ ಬಗ್ಗೆ ಚಿಂತಿತ ರಾಗಿದ್ದಾರೆ.

ಅನೇಕ ಉದ್ಯಮಗಳು ಮುಚ್ಚಿಹೋಗಿದ್ದು ಉದ್ಯಮಿಗಳು ಸಮಸ್ಯೆ ಅನುಭವಿಸುತ್ತಿದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸಿ ಸಾಂತ್ವಾನ ಹೇಳಿ ಧ್ಯೇರ್ಯ ತುಂಬಬೇಕಾದ ಸರಕಾರ, ಶಾಸಕರು, ಮಂತ್ರಿಗಳು ಜನರಿಂದ ಹಣವನ್ನು ದೋಚಿ ತನ್ನ ಜೇಬುಗಳನ್ನು ತುಂಬಿಸುವ ಕೆಲಸದಲ್ಲಿ ಮಗ್ನರಾಗಿದ್ದಾರೆ.

ಕಷ್ಟದಲ್ಲಿ ತತ್ತರಿಸಿರುವ ಜನರ ಮೇಲೆ ನಡೆಯುತ್ತಿರುವ ಈ ದಬ್ಬಾಳಿಕೆ ಹಾಗೂ ಬೆಲೆ ಏರಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ ಮತ್ತು ವಿದ್ಯುತ್ ದರ ಏರಿಕೆಯ ಆದೇಶ ವನ್ನು ಹಿಂಪಡೆ ಯುವಂತೆ ಆಗ್ರಹಿಸಿದ್ದಾರೆ.

 
 
 
 
 
 
 
 
 

Leave a Reply