ವಿದೇಶಗಳಿಂದ ಬಂದವರಿಗೆ ಕ್ವಾರಂಟೈನ್ ಕಡ್ಡಾಯ

ಮಂಗಳೂರು: ವಿದೇಶಗಳಿಂದ ಬಂದವರಿಗೆ ಕ್ವಾರಂಟೈನ್ ಕಡ್ಡಾಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
ವಿದೇಶಗಳಿಂದ ಬಂದವರು ಕಡ್ಡಾಯವಾಗಿ 14 ದಿನ ಕ್ವಾರೆಂಟೈನ್ ಇರಬೇಕಾಗುತ್ತದೆ. ಅದರಲ್ಲಿ 7 ದಿನಗಳ ಕಾಲ ಸಾಂಸ್ಥಿಕ ಕ್ವಾರೆಂಟೈನ್ ನಲ್ಲಿ ( ಲಾಡ್ಜ್ ) ಇರಲೇಬೇಕು. ಈ ಅವಧಿಯಲ್ಲಿ ಅವರ ಗಂಟಲುದ್ರವ ಪರೀಕ್ಷೆ ನಡೆಸಿ, ನೆಗೆಟಿವ್ ಬಂದಲ್ಲಿ 7 ನೇ ದಿನದ ನಂತರ ಹೋಂ ಕ್ವಾರೆಂಟೈನ್ ಗೆ ಕಳಿಸಲಾಗುತ್ತದೆ.
ಆದರೆ, ವಿದೇಶದಿಂದ ಬಂದವರಲ್ಲಿ 10 ವರ್ಷದೊಳಗಿನ ಮಕ್ಕಳು, 60 ವರ್ಷದ ಮೇಲಿನವರು, ಗರ್ಭಿಣಿಯರು, ಬೇರೆ ಖಾಯಿಲೆಗಳಿಂದ ಬಳಲುತ್ತಿರುವವರನ್ನು ಇದ್ದಲ್ಲಿ ಸಾಂಸ್ಥಿಕ ಕ್ವಾರೆಂಟೈನ್ (ಲಾಡ್ಜ್) ಗೆ ಕಳುಹಿಸಿದ ಮರುದಿನವೇ ಅವರ ಗಂಟಲದ್ರವ ಮಾದರಿ ಸಂಗ್ರಹಿಸಲಾಗುತ್ತದೆ. ನಂತರ ಲ್ಯಾಬ್ ವರದಿ ನೆಗೆಟಿವ್ ಬಂದರೆ ಮಾತ್ರ ಅವರನ್ನು 14 ದಿನಗಳ ಹೋಂ ಕ್ವಾರೆಂಟೈನ್ ಗೆ ಕಳುಹಿಸಲಾಗುತ್ತದೆ ಎಂದವರು ಸ್ಪಷ್ಟಪಡಿಸಿದ್ದಾರೆ.

 
 
 
 
 
 
 
 
 
 
 

Leave a Reply