ಲೆಬನಾನ್ನ ರಾಜಧಾನಿ ಬೈರುತ್ನಲ್ಲಿ ನಿನ್ನೆ ರಾತ್ರಿ ಶಕ್ತಿಶಾಲಿ ಸ್ಫೋಟ

ಬೈರುತ್: ಲೆಬನಾನ್ನ ರಾಜಧಾನಿ ಬೈರುತ್ನಲ್ಲಿ ನಿನ್ನೆ ರಾತ್ರಿ ಶಕ್ತಿಶಾಲಿ ಸ್ಫೋಟ ಸಂಭವಿಸಿದ್ದು, ಕನಿಷ್ಠ 78 ಜನ ಮೃತಪಟ್ಟಿದ್ದು, 4,000ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಗೆ 3.5 ತೀವ್ರತೆಯ ಭೂಕಂಪನ ಸೃಷ್ಟಿಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೆಂಟ್ರಲ್​ ಬೈರುತ್​ನ ಬಂದರು ಉಗ್ರಾಣದಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ನಂತರ ಪ್ರತಿಕ್ರಿಯೆ ನೀಡಿರುವ ಲೆಬನಾನ್ ಪ್ರೆಸಿಡೆಂಟ್ ಮೈಕೆಲ್ ಔನ್​, ಬಂದರಿನಲ್ಲಿ ಯಾವುದೇ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳದೆ 2,750 ಟನ್ ಅಮೋನಿಯಂ ನೈಟ್ರೇಟನ್ನು ದಾಸ್ತಾನು ಇರಿಸಲಾಗಿತ್ತು. ಆರು ವರ್ಷಗಳಿಂದ ಇಂತಹ ದಾಸ್ತಾನು ವ್ಯವಸ್ಥೆ ಅಲ್ಲಿತ್ತು. ಇದು ಅರಿವಿಗೆ ಬಾರದೇ ಹೋದುದು ದುರದೃಷ್ಟಕರ ಎಂದು ಹೇಳಿದ್ದಾರೆ. ಅಲ್ಲದೆ, ಎರಡು ವಾರ ಕಾಲ ತುರ್ತುಪರಿಸ್ಥಿತಿ ಘೋಷಣೆ ಮಾಡಿದ್ದಾರೆ.

 
 
 
 
 
 
 
 
 
 
 

Leave a Reply