ರಾಷ್ಟ್ರ ಮಟ್ಟದ ಸೃಜನಾತ್ಮಕ ಸ್ಪರ್ಧೆ

ಉಡುಪಿ, ಆ. 6: ಗಣೇಶೋತ್ಸವ ಅಂಗವಾಗಿ ಲಾಂಛನ ಸಂಸ್ಥೆ ವತಿಯಿಂದ ಗಣೇಶನ ಕುರಿತ ಚಿತ್ರ ರಚನೆ ಮತ್ತು ಕವನ ರಚನೆಯ ರಾಷ್ಟ್ರ ಮಟ್ಟದ ಸೃಜನಾತ್ಮಕ ಸ್ಪರ್ಧೆ ಆಯೋಜಿಸಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಸ್ಪರ್ಧಾಳುಗಳು ತಮ್ಮ ಮನೆಯಿಂದಲೇ ಭಾಗವಹಿಸಬಹುದು ಎಂದು ಲಾಂಛನ ಸಂಸ್ಥೆಯ ಶಶಾಂಕ ಶಿವತ್ತಾಯ ತಿಳಿಸಿದ್ದಾರೆ.ಗಣೇಶ ಚಿತ್ರ ರಚನೆ ಸ್ಪರ್ಧೆ ಎರಡು ವಿಭಾಗಗಳಲ್ಲಿ ನಡೆಯಲಿದೆ. `ವಿಶ್ವ ಗುರು ಗಣೇಶ’ ಪರಿಕಲ್ಪನೆಯಡಿ ಜಲವರ್ಣ ಚಿತ್ರ ರಚನೆ ಸ್ಪರ್ಧೆ ಹಾಗೂ `ಚಿಹ್ನೆಯಾಗಿ ಗಣೇಶ’ ಲಾಂಛನದಡಿ ರೇಖಾಚಿತ್ರ ರಚನೆ ಸ್ಪರ್ಧೆ ಆಯೋಜಿಸಲಾಗಿದೆ. ಈ ಎರಡೂ ವಿಭಾಗಗಳಲ್ಲಿ ಭಾಗವಹಿಸುವವರಿಗೆ ತಲಾ 200 ರೂ. ಪ್ರವೇಶ ಶುಲ್ಕ ಇರಿಸಲಾಗಿದೆ. ವಿಜೇತರಾದವರಿಗೆ ಪ್ರಥಮ, ದ್ವಿತೀಯ ಮತ್ತು ತೃತಿಯ ಬಹುಮಾನ ಅನುಕ್ರಮವಾಗಿ 7 ಸಾವಿರ, 5 ಸಾವಿರ ಮತ್ತು 3 ಸಾವಿರ ರೂ. ನಗದು ಹಾಗೂ ಪ್ರಮಾಣಪತ್ರ ನೀಡಲಾಗುವುದು.

`ಏಕತೆಯಲ್ಲಿ ಗಣೇಶ’ ಪರಿಕಲ್ಪನೆಯಡಿ ಕನ್ನಡ, ಹಿಂದಿ ಮತ್ತು ಆಂಗ್ಲಭಾಷೆಯಲ್ಲಿ ಕವನ ಸ್ಪರ್ಧೆ ಆಯೋಜಿಸಲಾಗಿದೆ. ಸ್ಪರ್ಧಾಳುಗಳಿಗೆ 100 ರೂ. ಪ್ರವೇಶ ಶುಲ್ಕ ಇರಿಸಲಾಗಿದೆ. ವಿಜೇತರಾದವರಿಗೆ ಪ್ರಥಮ, ದ್ವಿತೀಯ ಮತ್ತು ತೃತಿಯ ಬಹುಮಾನ ಅನುಕ್ರಮವಾಗಿ 5 ಸಾವಿರ, 4 ಸಾವಿರ ಮತ್ತು 3 ಸಾವಿರ ರೂ. ನಗದು ಹಾಗೂ ಪ್ರಮಾಣಪತ್ರ ನೀಡಲಾಗುವುದು ಎಂದವರು ತಿಳಿಸಿದ್ದಾರೆ.

14 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ವಯೋಮಾನದವರಿಗೆ ಸ್ಪರ್ಧೆ ಏರ್ಪಡಿಸಲಾಗಿದ್ದು, ಈಗಾಗಲೇ ರಾಜಸ್ಥಾನ, ಉತ್ತರ ಪ್ರದೇಶ ಮೊದಲಾದೆಡೆಗಳಿಂದ ಪ್ರವೇಶಪತ್ರ ಬಂದಿದೆ. ಸ್ಪರ್ಧಾಳುಗಳು ಆ. 31ರೊಳಗೆ ಲಾಂಛನ, `ಶ್ರೀಮಾತಾ’, ಎಸ್. ಟಿ. ಮಾರ್ಗ, ಕುಂಜಿಬೆಟ್ಟು, ಉಡುಪಿ ಈ ವಿಳಾಸಕ್ಕೆ ಚಿತ್ರ ಹಾಗೂ ಕವನ ಕಳಿಸಬೇಕು. ಸೆ. 7ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಶಿವತ್ತಾಯ ತಿಳಿಸಿದರು.

ತೇಜಸ್ವಿ ಆಚಾರ್ಯ ಇದ್ದರು.

 
 
 
 
 
 
 
 
 

Leave a Reply