ಬೆಂಗಳೂರು: ಕರೊನಾ ಲೌಕ್ಡೌನ್ ವೇಳೆ ಆನ್ಲೈನ್ ಮೂಲಕ ಮದ್ಯ ಸರಬರಾಜು ಮಾಡುವ ಕುರಿತು ಆಯಾ ರಾಜ್ಯಗಳು ತೀರ್ಮಾನ ತೆಗೆದುಕೊಳ್ಳಬಹುದು ಎಂದು ಸುಪ್ರೀಂಕೋರ್ಟ್ ಸಲಹೆ ನೀಡಿತ್ತು. ಕೆಲ ರಾಜ್ಯಗಳಲ್ಲಿ ಅನ್ಲೈನ್ನಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದೀಗ ಕರ್ನಾಟಕದಲ್ಲೂ ಆದಾಯ ನಷ್ಟ ಸರಿದೂಗಿಸಿಕೊಳ್ಳಲು ಆನ್ಲೈನ್ನಲ್ಲಿ ಮದ್ಯ ಮಾರಾಟದ ಬಗ್ಗೆ ರಾಜ್ಯ ಸರ್ಕಾರವೂ ಚಿಂತನೆ ನಡೆಸುತ್ತಿದೆ. ರಾಜ್ಯದಲ್ಲಿ ವೈನ್ಶಾಪ್, ಕ್ಲಬ್, ಸ್ಟಾರ್ ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಎಂಎಸ್ಐಎಲ್, ವೈನ್ ಬೋಟಿಕ್, ಮೈಕ್ರೊ ಬ್ರಿವರಿ, ಮಿಲಿಟರಿ ಕ್ಯಾಂಟೀನ್ ಸ್ಟೋರ್ ಸೇರಿ ಒಟ್ಟು 11,037 ಮದ್ಯದಂಗಡಿಗಳಿವೆ. ಇದರಿಂದ ಪ್ರತಿ ವರ್ಷ 22,700 ಕೋಟಿ ರೂ. ರಾಜಸ್ವ ಸಂಗ್ರಹ ಆಗುತ್ತಿದೆ. ಒಂದು ವೇಳೆ ಮದ್ಯಮಾರಾಟಕ್ಕೆ ಆನ್ಲೈನ್ ವ್ಯವಸ್ಥೆ ಜಾರಿಗೆ ಬಂದರೆ ಸರ್ಕಾರಕ್ಕೆ ಪ್ರತಿ ವರ್ಷ 2,500 ಕೋಟಿ ರೂ. ಹೆಚ್ಚುವರಿ ಆದಾಯ ಬರಲಿದೆ. ಹೀಗಾಗಿ, ಆನ್ಲೈನ್ ವ್ಯವಸ್ಥೆಗೆ ರಾಜ್ಯ ಸರ್ಕಾರ ಅನುಮತಿ ನೀಡುವ ಸಾಧ್ಯತೆ ಹೆಚ್ಚಿದೆ.
KaravaliXpress.com - ವಿಶ್ವಾಸದ ನಡೆ
ಬದಲಾವಣೆ ಜಗದ ನಿಯಮ. ಅದಕ್ಕೆ ಮಾಧ್ಯಮ ಲೋಕವೂ ಹೊರತಲ್ಲ.
ಪತ್ರಿಕಾರಂಗದಲ್ಲಿ ಸುಮಾರು ಎರಡು ದಶಕಗಳ ಅನುಭವ, ಸಹೃದಯರ ಒಡನಾಟದ ಅನುಭವಾಮೃತದಿಂದ ಮೊಳಕೆಯೊಡೆದಿದೆ ಈ ವೆಬ್ ಸುದ್ದಿಜಾಲ.