Janardhan Kodavoor/ Team KaravaliXpress
26.6 C
Udupi
Saturday, November 26, 2022
Sathyanatha Stores Brahmavara

ರಸ್ತೆ ದುರಸ್ತಿಗಾಗಿ ಪ್ರತಿಭಟನೆ

ಗುರುವಾರ ಸ್ಥಳೀಯ ಸಮಾನ ಮನಸ್ಕ ರಿಂದ ಉಗ್ರ ಮಟ್ಟದ ಪ್ರತಿಭಟನೆ


ಕೋಡಿ ಕನ್ಯಾನದಿಂದ ಮಣ್ಣೂರು ಕೋಟ ತಟ್ಟು ಪಡುಕೆರೆ ಸಂಪರ್ಕದ ಮೀನು ಗಾರಿಕೆ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಇದನ್ನು ನೋಡಿಯೂ *ಕೋಟತಟ್ಟು ಗ್ರಾಪಂ ಇಲಾ ಖೆ ಹಾಗೂ ಸ್ಥಳೀಯ ಶಾಸಕರು ಮತ್ತು ಸ್ಥಳೀ ಯ ಸಂಸದರು ಹಾಗು ಕೋಟತಟ್ಟು ಗ್ರಾಮ ಪಂಚಾಯತ್ ಬೇಜವಾಬ್ದಾರಿಯಿಂದ ಯಾವುದೇ ಅನುದಾನವನ್ನು ಬಿಡುಗಡೆ ಮಾಡದೇ, ಕೇಳಿದರೆ ಕಾಗಕ್ಕ ಗುಬ್ಬಕ್ಕನ ಕತೆ ಹೇಳುತ್ತಿದ್ದು , ಇಂದು ರಸ್ತೆಯು ಸಂಪೂರ್ಣ ಹದಗೆಟ್ಟು , ಎಲ್ಲಾ ಪಾದಚಾರಿಗಳಿಗೂ ಎಲ್ಲ ಘನ ವಾಹನಗಳಿಗೂ ತುಂಬಾ ತೊಂದರೆ ಯಾಗುತ್ತಿದೆ .

ಈ ರಸ್ತೆಯಲ್ಲಿ ಹಲವು ಅತಿ ಭಾರದ ಕಂಟೇ ನರ್ ವಾಹನಗಳ ಓಡಾಟದಿಂದ ಸರಿ ಸುಮಾರು 7 ಕಿಲೋಮೀಟರ್ ರಸ್ತೆಯು ಸಂಪೂರ್ಣ ಹಾಳಾಗಿದೆ , ಸ್ಥಳೀಯ ನಾಗರಿಕರು ಎಷ್ಟೇ ಮನವಿ ನೀಡಿದರೂ, ಈ ರಸ್ತೆಯು ಯಾವುದೇ ಕಾಮಗಾರಿಯನ್ನು ಕಾಣದೆ , ಬೇರೆಲ್ಲ ರಸ್ತೆಯ ಕಾಮಗಾರಿ ನಡೆಯುತ್ತಿದ್ದು , ಈ ರಸ್ತೆಯು ಇವತ್ತು ಯಾವುದೇ ದುರಸ್ತಿ ಕಾಣದೆ ಇಂದು ಸಂಪೂರ್ಣ ನಶಿಸಿ ಹೋಗಿದೆ .


ಆದುದರಿಂದ ಗುರುವಾರ ಬೆಳಿಗ್ಗೆ 9.00 ಗಂಟೆಗೆ ಸರಿಯಾಗಿ ಸ್ಥಳೀಯ ಸಮಾನ ಮನಸ್ಕರಿಂದ ಕೋಟ ಗ್ರಾಪಂ ಇಲಾಖೆ ಹಾಗೂ ಸ್ಥಳೀಯ ಶಾಸಕರು ಮತ್ತು ಕೋಟತಟ್ಟು ಗ್ರಾಮ ಪಂಚಾಯತ್ ನ ವಿರುದ್ಧ ರಸ್ತೆಯ ಕಾಮಗಾರಿಯ ವಿಷಯದ ಬಗ್ಗೆ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳ ಲಾಗಿದೆ

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!