Janardhan Kodavoor/ Team KaravaliXpress
26.6 C
Udupi
Saturday, November 26, 2022
Sathyanatha Stores Brahmavara

‘ಮುಚ್ಚಿಟ್ಟ ದಲಿತ ಚರಿತ್ರೆ’ ಪುಸ್ತಕ ಲೋಕಾರ್ಪಣೆ


ಲೇಖಕ ರಾಕೇಶ್ ಶೆಟ್ಟಿ ಅವರ ‘ಮುಚ್ಚಿಟ್ಟ ದಲಿತ ಚರಿತ್ರೆ’ ಪುಸ್ತಕವನ್ನು ಪತ್ರಕರ್ತ ಗುರುವಪ್ಪ ಬಾಳೆಪುಣಿ ಶನಿವಾರ ಅಂಬಲ ಪಾಡಿಯ ಕಾರ್ತಿಕ್ ಎಸ್ಟೇಟ್‌ನ ಸಭಾಂಗ ಣದಲ್ಲಿ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಸರಿ ಸಮಾನವಾಗಿ ದಲಿತರ ಪರ ಧ್ವನಿಯಾಗಿ ಜೋಗೇಂದ್ರನಾಥ ಬಹಳ ಹಿಂದೆ ಹೋರಾಟವನ್ನು ಮಾಡಿದ್ದರು. ಅವರ ಬಗ್ಗೆ ಇತಿಹಾಸದಲ್ಲಿಯಾವುದೇ ಉಲ್ಲೇಖ ಇಲ್ಲ ಎಂದು ಹೇಳಿದರು.

ಲೇಖಕ ರಾಕೇಶ್ ಶೆಟ್ಟಿ ಮಾತನಾಡಿ, ಜೋಗೇಂದ್ರನಾಥ್ ದಲಿತ ಪರ ಹೋರಾಟ ಗಾರ. ಆದರೆ ಕೆಲವು ಪ್ರಭಾವಶಾಲಿಗಳ ಹುನ್ನಾರದಿಂದ ಇತಿಹಾಸ ಅವರನ್ನು ಮರೆತಂತೆ ನಟಿಸುತ್ತಿದೆ.

ದಲಿತರ ಮೇಲಾಗುವ ದೌರ್ಜನ್ಯದ ವಿರುದ್ಧ ಬಹಳ ಹಿಂದೆಯೇ ಧ್ವನಿಯನ್ನು ಎತ್ತಿದ್ದರು ಎಂದರು.


ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಪಂಚಾ ಯತ್ ಅಧ್ಯಕ್ಷ ದಿನಕರ್ ಬಾಬು ಉದ್ಘಾಟಿ ಸಿದರು.  ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಪ್ರಾಸ್ತಾವಿಸಿದರು. ವಂಸತ ಶೆಟ್ಟಿ ಗಿಳಿಯಾರ್ ನಿರೂಪಿಸಿದರು. ಶಶಾಂಕ್ ಶಿವತ್ತಾಯ ವಂದಿಸಿದರು. ಬಳಿಕ ಲೇಖಕರೊಂದಿಗೆ ಸಂವಾದ ಕಾರ್ಯಕ್ರಮ

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!