ಮಲ್ಪೆ ಪೊಲೀಸ್ ಸ್ಟೇಷನ್ ಸ್ಯಾನಿಟೈಜ್ !

 

ಮಲ್ಪೆ: ಕೋವಿಡ್19 ಇಂದ ಇಡೀ ಪ್ರಪಂಚವೇ ಹೋರಾಡುತಿರುವ ಈ ಸಮಯದಲ್ಲಿ, ತಮ್ಮ ಪ್ರಾಣವನ್ನು ಲೆಕ್ಕಿಸದೆ ಹಲವಾರು ‘ಕೋವಿಡ್ ವಾರೀಯರ್ಸ್’ ತಮ್ಮ ಸೇವೆಯನ್ನು ನಿರಂತರವಾಗಿ ಸಲ್ಲಿಸುತಿದ್ದಾರೆ. ತಮ್ಮ ಹಾಗೂ ತಮ್ಮ ಕುಟುಂಬದ ರಕ್ಷಣೆಯನ್ನು ಬದಿಗಿಟ್ಟು, ನಮ್ಮ ಪೋಲೀಸ್ ಇಲಾಖೆ ನಿರಂತರವಾಗಿ ಜನರ ಸೇವೆಗೆ ಹಾಜರಿದ್ದಾರೆ. ನಮ್ಮೆಲ್ಲರ ರಕ್ಷಣೆಗೆ ಪೋಲೀಸ್ ಇಲಾಖೆ ನೀಡುವ ಸಹಕಾರ ನಿಜವಾಗಿಯೂ ಶ್ಲಾಘನೀಯವಾದದ್ದು.

ಪೋಲೀಸ್ ಇಲಾಖೆ ನೀಡುವ ಈ ಸೇವೆಗೆ ಧನ್ಯವಾದ ಸಲ್ಲಿಸಲು ಹಾಗೂ ಪೋಲೀಸ್ ಸಿಬ್ಬಂದಿಗಳ ಆರೋಗ್ಯದ ಸುರಕ್ಷತೆಯ ನಿಟ್ಟಿನಲ್ಲಿ ‘ಸ್ವಚಂ ಕ್ಲೀನಿಂಗ್ ಸರ್ವೀಸಸ್’ ಸಂಸ್ಥೆಯ ಸಿಬ್ಬಂದಿಗಳು ಇಂದು ಮಲ್ಪೆಯ ಆರಕ್ಷಕ ಠಾಣೆ ಯನ್ನು ಸಂಪೂರ್ಣ ಸ್ವಚ್ಛಗೊಳಿಸಿ, ಸ್ಯಾನಿಟೈಜ್ ಮಾಡಿದರು ಈ ಕಾರ್ಯಕ್ರಮವನ್ನು ರೋಟರಿ ಕಲ್ಯಾಣಪುರದ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ಇದರ ಉದ್ಘಾಟನೆಯನ್ನು ಠಾಣಾಧಿಕಾರಿ ತಿಮ್ಮೇಶ್ ಮಾಡಿದರು.

ಸ್ವಚಂ ಕ್ಲೀನಿಂಗ್ ಸರ್ವೀಸಸ್ ಸಂಸ್ಥೆಯ ಮಾಲಕರಾದ ತಾರಾನಾಥ್ ಪೂಜಾರಿ ಮಾತನಾಡಿ, ” ನಮಗಾಗಿ ಹಗಲಿರುಳು ದುಡಿಯುತಿರುವ ಪೋಲೀಸ್ ಸಿಬ್ಬಂದಿಗಳ ರಕ್ಷಣೆಗಾಗಿ, ಹಾಗೂ ಅವರ ಸೇವೆಗೆ ನಮ್ಮ ಮೆಚ್ಚುಗೆ ತೋರಲು, ಈ ಕಾರ್ಯಕ್ರಮ್ಮವನ್ನು ನಾವು ಆಯೋಜಿಸಿದೆವು. ಸಂಪೂರ್ಣ ಪೋಲೀಸ್ ಠಾಣೆಯನ್ನು ನಾವು ಸೂಕ್ತ ಸ್ಪ್ರೇ ಹಾಗೂ ಸ್ಯಾನಿಟೈಸರ್ ಬಳಿಸಿ ಸ್ಯಾನಿಟೈಸ್ ಮಾಡಿದ್ದೇವೆ.

ನುರಿತ ಸ್ವಚ್ಚತಾ ಒಳಗೊಂಡಿರುವ ಈ ಸಂಸ್ಥೆಯು ಕಳೆದ ಕೆಲವು ತಿಂಗಳಿಂದ ಉಡುಪಿ ಹಾಗೂ ಮಂಗಳೂರಿನ ಸುತ್ತಮುತ್ತಲಿನ ಮನೆ ,ಕಛೇರಿ, ವ್ಯಾಪಾರ ಮತ್ತು ವಸತಿ ಸಮುಚ್ಚಯಗಳ ಸ್ಯಾನಿಟಿಸೇಶನ್ ಸೇವೆಯಲ್ಲಿ ಉತ್ತಮ ಸೇವೆ ನೀಡುತ್ತಿದೆ. ಆಧುನಿಕ ತಂತ್ರಜ್ಞಾನ, ಆಧುನಿಕ ಸಲಕರಣೆಗಳ ಉಪಯೋಗ, ಪರಿಸರ ಸ್ನೇಹಿ ರಾಸಾಯನಿಕಗಳನ್ನು ಉಪಯೋಗಿಸುವ ಈ ಸಂಸ್ಥೆ, ತಮ್ಮ ಗ್ರಾಹಕರ ಆರೋಗ್ಯ ಹಾಗೂ ಸ್ವಾಸ್ಥ ಸುರಕ್ಷತೆಯನ್ನು ಕಾಪಾಡುವುದಕ್ಕೆ ಹೆಚ್ಚಿನ ಆಧ್ಯತೆ ನೀಡುವುದರೊಂದಿಗೆ ಭರವಸೆಯ ಸಂಸ್ಥೆಯಾಗಿ ಮೂಡಿಬಂದಿದೆ.

ಮಲ್ಪೆ ಆರಕ್ಷಕ ಠಾಣೆ ಶುಚಿಗೊಳಿಸುವ ಕಾರ್ಯದಲ್ಲಿ ರೋಟರಿ ಕ್ಲಬ್, ಕಲ್ಯಾಣಪುರ ಅಧ್ಯಕ್ಷ ರಾದ ರೋ ಡೆಸ್ಮಂಡ್ ವಾಜ್, ಮಾಜಿ ಅಧ್ಯಕ್ಷ  ರಾಮ ಪೂಜಾರಿ, ಮಾಜಿ ಸಹಾಯಕ ಗವರ್ನರ್  ಎಮ್. ಮಹೇಶ್ ಕುಮಾರ್, ಸುನಿಲ್ ಪೂಜಾರಿ ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply