ಭೂಮಿಪೂಜೆ ಅಂಗವಾಗಿ ರಂಗೋಲಿ ಸ್ಪರ್ಧೆ

ಉಡುಪಿ: ಈ ತಿಂಗಳ 5ರಂದು ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮ ಮಂದಿರ ಭೂಮಿಪೂಜೆ ಅಂಗವಾಗಿ ಉಡುಪಿ ನಗರ ಬಿಜೆಪಿ ಹಾಗೂ ಮಹಿಳಾ ಮೋರ್ಚಾ ವತಿಯಿಂದ ಮನ್ವಂತರ 2020 ಶೀರ್ಷಿಕೆಯಡಿ ಸಾಮಾಜಿಕ ಜಾಲತಾಣ ಮೂಲಕ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ.

ರಂಗೋಲಿಯಲ್ಲಿ ದೀಪ ಅಥವಾ ಹಣತೆ ಇಡಬೇಕು. ಒಬ್ಬರು ಅಥವಾ ತಂಡವಾಗಿ ಭಾಗವಹಿಸಬಹುದು. ತಂಡದವರು ಕಳಿಸುವ ವೀಡಿಯೊದಲ್ಲಿ ಸ್ಪರ್ಧಿ ದೀಪ ಹಚ್ಚುತ್ತಿರುವುದನ್ನು ಚಿತ್ರೀಕರಿಸಬೇಕು. ವೀಡಿಯೊದಲ್ಲಿ ತಂಡದ ಹೆಸರು ಹಾಗೂ ಮೊಬೈಲ್ ಸಂಖ್ಯೆ ನಮೂದಿಸಬೇಕು. ವೀಡಿಯೊ ಅವಧಿ 30 ಸೆಕೆಂಡ್ ಮೀರಬಾರದು. ವೀಡಿಯೊವನ್ನು ಆ. 6ರ ಸಂಜೆ 5 ಗಂಟೆಯೊಳಗೆ 7996977677ಗೆ ವಾಟ್ಸಾಪ್ ಮೂಲಕ ಕಳಿಸಬೇಕು.

ವಿಜೇತರಿಗೆ ಅನುಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಅನುಕ್ರಮವಾಗಿ 5 ಸಾವಿರ, 4 ಸಾವಿರ ಮತ್ತು 3 ಸಾವಿರ ರೂ. ನೀಡಲಾಗುವುದು ಎಂದು ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ತಿಳಿಸಿದ್ದಾರ

Leave a Reply