Janardhan Kodavoor/ Team KaravaliXpress
25.6 C
Udupi
Monday, June 27, 2022
Sathyanatha Stores Brahmavara

ಮತ್ತೆ ಸ್ಫೋಟಕ ಹೇಳಿಕೆ ನೀಡಿದ ಇಂದ್ರಜಿತ್ ಲಂಕೇಶ್!

ಬೆಂಗಳೂರು: ಸ್ಯಾಂಡಲ್ ವುಡ್ ನ ಅನೇಕರು ಡ್ರಗ್ಸ್ ದಂಧೆ ಕುರಿತು ಸಿಸಿಬಿ ಪೊಲೀಸರ ಮುಂದೆ ಮಾಹಿತಿ ನೀಡೋದಕ್ಕೆ ಹಾಜರಾದ ನಿರ್ದೇಶಕ ಇಂದ್ರಜಿತ್ ಲಂಕೇಶ್, ಹಲವು ಸ್ಫೋಟಕ ಹೇಳಿಕೆಯನ್ನು ಸಿಸಿಬಿ ಪೊಲೀಸರ ಮುಂದೆ ನೀಡಿದ್ದಾರೆ ಎಂಬು ದಾಗಿ ತಿಳಿದು ಬಂದಿದೆ.


ಸತತ ಐದಾರು ಗಂಟೆಗಳ ಸಿಸಿಬಿ ಪೊಲೀಸ ರಿಗೆ ಮಾಹಿತಿ ನೀಡಿದ ಬಳಿಕ ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಲಂಕೇಶ್, ಮತ್ತಷ್ಟು ಮಾಹಿತಿ ಮಾದ್ಯಮಗಳ ಮುಂದೆ ಹೇಳಿದ್ದಾರೆ. ಸಿಸಿಬಿ ಮುಂದೆ ಡ್ರಗ್ಸ್ ದಂಧೆಯಲ್ಲಿ ಸ್ಯಾಂಡಲ್ ವುಡ್ ನ 10 ರಿಂದ 15 ಹೆಸರುಗಳನ್ನು ಹೇಳಿರುವುದಾಗಿ ಸ್ವತಹ ಇಂದ್ರಜಿತ್ ಲಂಕೇಶ್ ಅವರೇ ತಿಳಿಸಿದ್ದಾರೆ.


ಸಿಸಿಬಿ ಪೊಲೀಸ್ ಅಧಿಕಾರಿಗಳು ಕೇಳಿದಂತ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ನಾನು ಹೇಳಿದಂತೆ ಸಿಸಿಬಿ ಪೊಲೀಸರಿಗೆ ದಾಖಲೆ ಸಹಿತ ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆಯ ಬಗ್ಗೆ ಮಾಹಿತಿ ನೀಡಿದ್ದೇನೆ.

ಸ್ಯಾಂಡಲ್ ವುಡ್ ನ 10 ರಿಂದ 15 ಜನರ ಹೆಸರುಗಳನ್ನು ತಿಳಿಸಿರುವುದಾಗಿ ಸ್ಪೋಟಕ ಮಾಹಿತಿಯನ್ನು ಬಿಚ್ಚಿಟ್ಟರು.

ಚಿರು ಕುರಿತು ಹೇಳಿಕೆ: ಇತ್ತೀಚಿಗೆ ನಿಧನರಾದ ಚಿರು ಕುರಿತು ನೀಡಿದ ನನ್ನ ಹೇಳಿಕೆಯನ್ನ ಹಿಂದೆ ತೆಗೆದುಕೊಳ್ಳುತ್ತಿದ್ದೇನೆ ಎಂದು ಇಂದ್ರಜೀತ್‌ ಸ್ಪಷ್ಟ ಪಡಿಸಿದ್ದಾರೆ.
ಸತ್ತವರ ಬಗ್ಗೆ ಮಾತನಾಡುವುದು ಸರಿಯಲ್ಲ. ನನ್ನ ಹೇಳಿಕೆಯಿಂದ ಕುಟುಂಬಕ್ಕೆ ನೋವಾ ಗಿದೆ. ಇದರಲ್ಲಿ ನನ್ನದೇನು ದುರುದ್ದೇಶ ಆದರೆ ಒಳ್ಳೆ ಭವಿಷ್ಯವಿದ್ದ ನಟ ನಮ್ಮ ಬಿಟ್ಟು ಅಗಲಿದ್ದಾನಲ್ಲ ಎಂಬ ನೋವಿದೆ.

ಹಾಗಾಗಿ ಮರಣೋತ್ತರ ಯಾಕೆ ಮಾಡಿಸ ಲಿಲ್ಲ ಎಂದಿದ್ದೆ. ಸಧ್ಯ ನನ್ನ ಹೇಳಿಕೆಯನ್ನು ಹಿಂತೆಗೆದುಕೊಳ್ಳುತ್ತಿದ್ದೇನೆ ಎಂದು ನಿರ್ದೇಶಕ ಇಂದ್ರಜೀತ್‌ ಲಂಕೇಶ್‌ ಹೇಳಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!