ಮಣಿಪಾಲ-ಪೆರಂಪಳ್ಳಿ- ಆಂಬಾಗಿಲು ರಸ್ತೆ ಅಗಲೀಕರಣ

ಮಣಿಪಾಲ-ಪೆರಂಪಳ್ಳಿ- ಆಂಬಾಗಿಲು ರಸ್ತೆ ಅಗಲೀಕರಣಕ್ಕೆ ಭೂ ಸ್ವಾಧೀನ… ಶಾಸಕ ಕೆ ರಘುಪತಿ ಭಟ್ ಸ್ಥಳ ಪರಿಶೀಲನೆ

ಉಡುಪಿ ವಿಧಾನಸಭಾ ಕ್ಷೇತ್ರದ ನಗರಸಭಾ ವ್ಯಾಪ್ತಿಯ ಮಣಿಪಾಲ-ಪೆರಂಪಳ್ಳಿ-ಆಂಬಾಗಿಲು ಮುಖ್ಯ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಈಗಾಗಲೇ ಅನುದಾನ ಮಂಜೂರಾಗಿದ್ದು, ಈ ರಸ್ತೆಯ ಅಗಲೀಕರಣಕ್ಕೆ ಭೂ-ಸ್ವಾಧೀನ ಪಡಿಸುವ ಸಲುವಾಗಿ ಇಂದು ಶಾಸಕ ಕೆ.ರಘುಪತಿ ಭಟ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಗರಾಭಿವೃದ್ಧಿ ಪ್ರಾಧಿಕಾರದಿಂದ ಟಿ.ಡಿ.ಆರ್. ಮೂಲಕ ರಸ್ತೆ ಅಗಲ ಮಾಡುವ ಬಗ್ಗೆ ಭೂ ಮಾಲಕರಲ್ಲಿ ವಿನಂತಿಸಿದರು. ಬಳಿಕ ಸ್ಥಳಗಳನ್ನು ಗುರುತಿಸಿ ಈ ತಿಂಗಳ 27 ತಾರೀಕಿನ ಒಳಗೆ ರಸ್ತೆಯ ಸಂಪೂರ್ಣ ಸರ್ವೆ ನಡೆಸಿ ಮತ್ತೊಮ್ಮೆ ಸ್ಥಳ ಪರಿಶೀಲನೆ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಸ್ಥಳೀಯ ನಗರಸಭಾ ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ, ಗಿರಿಧರ್ ಕರಂಬಳ್ಳಿ, ಗಿರೀಶ್ ಅಂಚನ್, ನಗರ ಆಶ್ರಯ ಸಮಿತಿ ಸದಸ್ಯ ಡೆನ್ನಿಸ್ ಪೆರಂಪಳ್ಳಿ, ಹಾಗೂ ಪ್ರಮುಖರಾದ ಅರುಣಾ ಪೂಜಾರಿ ಮತ್ತು ಉಡುಪಿ ತಹಶೀಲ್ದಾರ ಪ್ರದೀಪ್ ಕುರ್ಡೆಕರ್, ಪಿ.ಡಬ್ಲ್ಯೂ.ಡಿ ಸಹಾಯಕ ಕಾರ್ಯಪಾಲಕ ಅಭಿಯಂತರ ಜಗದೀಶ್ ಭಟ್, ಸಹಾಯಕ ಅಭಿಯಂತರ ಸೋಮನಾಥ್, ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಭೂಮಾಪನ ಅಧಿಕಾರಿಗಳು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

Leave a Reply