ನಾಯಿಗೆ ಖೆಡ್ಡಾ – ಮನೆ ಮಾಲಿಕ ಬಲಿ

ಶಿವಮೊಗ್ಗ : ಹುಚ್ಚು ನಾಯಿಗೆ ಖೆಡ್ಡಾ ತೋಡಲು ಹೋಗಿ ವ್ಯಕ್ತಿಯೊಬ್ಬ ಬಲಿಯಾದ ಘಟನೆ ಸೊರಬ ಪಟ್ಟಣದ ಕಾನಕೇರಿ ಬಡಾ ವಣೆ ಯಲ್ಲಿ ತಡರಾತ್ರಿ ವರದಿಯಾಗಿದೆ. ಸೊರಬ ಪಟ್ಟಣದ ಕಾನಕೇರಿ ಬಡಾವಣೆ ಯಲ್ಲಿ ಮನೆಯ ಅಂಗಳಕ್ಕೆ ಹಾಗೂ ಮನೆಯ ಒಳಗಡೆ ಹುಚ್ಚುನಾಯಿ ಬರುತ್ತದೆ ಎಂದು ಮನೆಯ ಮಾಲಿಕ ನಿಂಗಪ್ಪ ಪುಟ್ಟಪ್ಪ (58) ಗೇಟ್ ನ ಮುಂಭಾಗ ತಂತಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾನೆ.

ರಾತ್ರಿ ಮೂತ್ರ ಮಾಡಲು ತೆರಳಿದಾಗ ಆತ ಅದೇ ತಂತಿ ತುಳಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಹುಚ್ಚು ನಾಯಿಗೆ ಖೆಡ್ಡಾ ತೋಡಲು ಹೋಗಿ ಆತನೇ ಮೃತಪಟ್ಟಿರು ವುದು ದುರ್ಧೈವ ಒಂದೆಡೆಯಾದರೆ, ಮತ್ತೊಂದಡೆ ಪ್ರಕರಣವೀಗ ನಾಗರೀಕರಲ್ಲಿ ಭಯವನ್ನೇ ಸೃಷ್ಟಿಸಿದೆ.


ಪತ್ರಿಕೆ ಹಂಚುವವರು, ತರಕಾರಿ ಮಾರುವ ವರು, ಹಾಲು ವಿತರಿಸುವವರು ಮನೆಗಳಿಗೆ ತೆರಳಲು ಆತಂಕ ಪಡುವಂತಾಗಿದೆ. ಮೂರ್ಖ ತನದಿಂದ ಮಾಡಿಕೊಂಡ ಎಡವಟ್ಟಿಗೆ ಆತನೇ ಬಲಿಯಾಗಿದ್ದಾನೆ. ಮೃತ ನಿಂಗಪ್ಪನ ಪುತ್ರ ರಾಕೇಶ್ ಕುಮಾರ್ ನೀಡಿದ ಹೇಳಿಕೆ ಅನ್ವಯ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply