ನದಿ-ಜಲಪಾತಗಳ ಬಳಿ ನಿಯಮ ಉಲ್ಲಂಘಿಸಿದ್ರೆ 6 ತಿಂಗಳು ಜೈಲು

ರಾಜ್ಯದಲ್ಲಿ ವರುಣನ ಅಬ್ಬರ ಮುಂದುವರೆದಿದ್ದು ಪ್ರವಾಹದ ಭೀತಿ ಎದುರಾಗಿದೆ. ಈ ನಿಟ್ಟಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ವಿಶೇಷ ಸೂಚನೆಯೊಂದನ್ನು ನೀಡಿದ್ದಾರೆ. ಪೋಲಿಸ್ ಇಲಾಖೆಯ ಎಚ್ಚರಿಕೆಯ ಕ್ರಮ ಮೀರಿ ನೀರಿನ ಬಳಿ ಸೆಲ್ಫಿ ತೆಗೆಯಲು ಮುಂದಾಗುವ ಪುಂಡ-ಪೋಕರಿಗಳಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗುವುದು ಎಂದರು

ಸಕಲೇಶಪುರ ತಾಲೂಕಿನಲ್ಲಿ ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿದ ಅಶೋಕ್, ಪ್ರತಿ ವರ್ಷ ಮಳೆಯಾಗಿ ಜನರ ಮನೆ, ಆಸ್ತಿ-ಪಾಸ್ತಿ ಹಾನಿಯಾಗುತ್ತದೆ. ಮಳೆಗಾಲ ಬಂದ್ರೆ ಸಾಕು ಯುವಕ-ಯುವತಿಯರು ಬೈಕ್ ಹತ್ತಿ ಊರು ಸುತ್ತೋದಕ್ಕೆ ರೆಡಿಯಾಗ್ಬಿಡ್ತಾರೆ. ಈ ನಡುವೆ ಧುಮ್ಮಿಕ್ಕಿ ಹರಿಯುವ ಜಲಪಾತ, ನದಿ ತೀರ ಪ್ರದೇಶಗಳಿಗೆ ತೆರಳುವ ಅನೇಕರು ಅಪಾಯವನ್ನು ಲೆಕ್ಕಿಸದೇ ಜಲಪಾತಗಳಿಗೆ ಇಳಿಯೋದು, ಉಕ್ಕಿ ಹರಿಯುವ ನದಿಗೆ ಧುಮುಕಿ ಈಜೋದು, ಜಲಪಾತದ ತುದಿಗೆ ತೆರಳಿ ಸೆಲ್ಫಿ ತೆಗೆದುಕೊಳ್ಳೋದು ಸೇರಿದಂತೆ ಇನ್ನಿತರ ಪುಂಡಾಟ ಆಡುವವರಿಗೆ ಬ್ರೇಕ್ ಹಾಕುವ ಸಲುವಾಗಿ ಕಂದಾಯ ಸಚಿವ ಆರ್ ಅಶೋಕ್ ಪೊಲೀಸರಿಗೆ ಸೂಚನೆ ಯೊಂದನ್ನು ನೀಡಿದ್ದಾರೆ.

ನದಿ-ಜಲಪಾತಗಳ ಬಳಿ ಯಾರೂ ಬರದಂತೆ, ಹಾಗು ಈಜುವುದು , ಸೆಲ್ಫಿ ತೆಗೆದುಕೊಳ್ಳುವುದೂ ಸೇರಿದಂತೆ ಅಪಾಯಕಾರಿ ಚಟುವಟಿಕೆ ನಡೆಸುವಂತಿಲ್ಲ ಎಂಬ ನಾಮಫಲಕಗಳನ್ನ ಕಡ್ಡಾಯವಾಗಿ ಹಾಕಿ. ಒಂದು ವೇಳೆ ಯಾರಾದರೂ ನಿಯಮ ಮೀರಿ ವರ್ತಿಸಿದಲ್ಲಿ ಅಂಥವರನ್ನ ಮುಲಾಜಿಲ್ಲದೆ ವಶಕ್ಕೆ ಪಡೆದು 6 ತಿಂಗಳು ಜೈಲುಶಿಕ್ಷೆಗೊಳಪಡಿಸುವಂತೆ ಅಶೋಕ್ ಸೂಚಿಸಿದ್ದಾರೆ. 

ಸೋಮವಾರ ಪ್ರಧಾನಿಯವರ ಜೊತೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಬಸವರಾಜ ಬೊಮ್ಮಾಯಿ ಮತ್ತು ನಾನು ಮಾತನಾಡಲಿದ್ದು, ರಾಜ್ಯಕ್ಕೆ ಹೆಚ್ಚಿನ ಮುಂಗಡ ಹಣ ನೀಡುವಂತೆ ಮನವಿ ಮಾಡಲಿದ್ದೇವೆ ಎಂದು ಅಶೋಕ್ ತಿಳಿಸಿದರು.

 
 
 
 
 
 
 
 
 
 
 

Leave a Reply