ತೆಕ್ಕಟ್ಟೆ :ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಉದ್ಘಾಟನೆ

ಕುಂದಾಪುರ : ಕೋವಿಡ್ ಸೋಂಕು ತಡೆಗಟ್ಟಲು ಸಕಾ೯ರ ದೊಂದಿಗೆ ಎಲ್ಲಾ ಸಾವ೯ಜನಿಕರು ಸಹಕರಿಸಬೇಕು ಸಕಾ೯ರ ತನ್ನ ಎಲ್ಲಾ ಶ್ರಮವನ್ನು ಹಾಕುತ್ತಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಮುಜು ರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.


ತೆಕಟ್ಟೆಯಲ್ಲಿ ಪ್ರಾರಂಭವಾದ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಗಳಲ್ಲಿ ಕೋರೊನಾ ಟೆಸ್ಟ್ ಕಿಟ್ ಗಳನ್ನು ನೀಡ ಲಾಗಿದೆ.

ಸಾವ೯ಜನಿಕರು ಹೆದರದೆ ಜೀವನ ಸಾಗಿಸಬೇಕು ಎಂದರು.ಮುಖ್ಯ ಅತಿಥಿಗ ಳಾಗಿ ಭೂ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾII ಶೋಭಾ ಎಚ್, ಡಾ. ಕುಸುಮಾಕರ ಶೆಟ್ಟಿ, ಉದ್ಯಮಿ ಕೃಷ್ಣಮೂತಿ೯ ಕೊಠಾರಿ, ಫಾಮಾ೯ಸಿಸ್ಟ್ ಉಮೇಶ್ ಬಿತಿ೯ ಮುಂತಾದವರು ಭಾಗವಹಿಸಿದ್ದರು.

ಕೇಂದ್ರದ ಮುಖ್ಯಸ್ಥ ಸುಂದರ ಪೂಜಾರಿ ಮೂಡುಕುಕ್ಕುಡೆ ಪ್ರಸ್ತಾವನೆಗೈದು ಸ್ವಾಗತಿ ಸಿದರು.ಈ ಸಂದಭ೯ದಲ್ಲಿ ಕರೋನಾ ವಾರಿಯರ್ಸ್ ರವರನ್ನು ಗೌರವಿಸಲಾಯಿತು. ಉಮೇಶ್ ಬಿತಿ೯ ವಂದಿಸಿದರು. ರಾಘ ವೇಂದ್ರ ಪ್ರಭು,ಕವಾ೯ಲು ನಿರೂಪಿಸಿದರು. ಸಾವ೯ಜನಿಕರಿಗೆ ಉಚಿತವಾಗಿ ಮಾಸ್ಕ್ ಸ್ಯಾನಿಟೈಸರ್ ವಿತರಿಸಲಾಯಿತು.

 
 
 
 
 
 
 
 
 
 
 

Leave a Reply