ಕೇಂದ್ರದ ಹೊಸ ಶಿಕ್ಷಣ ನೀತಿಯಲ್ಲಿ ತುಳು ಭಾಷೆಗೆ ಮಾನ್ಯತೆ ನೀಡುವ ಬಗ್ಗೆ ಟ್ವೀಟ್ ಅಭಿಯಾನ.

ಪ್ರಾದೇಶಿಕ ಭಾಷೆಯಾಗಿ ಲಕ್ಷಾಂತರ ಜನರ ಮಾತೃಭಾಷೆಯಾಗಿದ್ದ ಹೊರತಾಗಿಯೂ ಶೈಕ್ಷಣಿಕ ಭಾಷಾ ಸ್ಥಾನಮಾನ ಸಹಿತ ಯಾವುದೇ ರೀತಿಯ ಸ್ಥಾನಮಾನ ತುಳು ಭಾಷೆಗೆ ದೊರಕಿಲ್ಲ. ಈ ನಿಟ್ಟಿನಲ್ಲಿ ಸಾಕಷ್ಟು ಮನವಿ ಪ್ರತಿಭಟನೆ ನಡೆದರೂ ಯಾವುದೇ ಪ್ರತಿಫಲ ಇಲ್ಲಿತನಕ ದೊರಕಿಲ್ಲ. ಸಾಕಷ್ಟು ಭಾರಿ ಆಶಾದಾಯಕ ಘೋಷಣೆಗಳು ರಾಜಕಾರಣಿಗಳಿಂದ ಬಂದಿದ್ದರು ಅದು ಘೋಷಣೆಯಾಗಿಯೇ ಉಳಿದಿದೆ.

ಸದ್ಯಕ್ಕೆ ಕೇಂದ್ರ ಸರಕಾರವು ಜಾರಿಗೆ ತರಲು ನಿರ್ಧರಿಸಿರುವ ಹೊಸ ಶಿಕ್ಷಣ ನೀತಿಯಲ್ಲಿ 5 ನೇ ತರಗತಿಯವರೆಗೆ ಮಾತೃ ಭಾಷೆಯಲ್ಲಿ ಅಥವಾ ಪ್ರಾದೇಶಿಕ ಭಾಷೆಯಲ್ಲಿ ವಿದ್ಯಾಭ್ಯಾಸ ಕೊಡಬೇಕೆಂಬ ನಿಯಮವಿದ್ದು. ಈ ನೀತಿಯಲ್ಲಿ ತುಳು ಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬ ನಿಯಮ ಸೇರಿಸಬೇಕೆಂಬುದು ತುಳುವರ ಆಶಯವಾಗಿದೆ. ತುಳು ಭಾಷೆಯಲ್ಲಿ ಶಿಕ್ಷಣ ತುಳುನಾಡಿನ ಮಕ್ಕಳಿಗೆ ದೊರೆಯ ಬೇಕಾಗಿದೆ. ತುಳುವರ ಮಕ್ಕಳಿಗೂ ತುಳು ಭಾಷೆಯಲ್ಲಿ ಕಲಿಯುವ ಹಕ್ಕು ನೀಡ ಬೇಕಾಗಿದೆ. ಈ ನಿಟ್ಟಿನಲ್ಲಿ ಜನ ಪ್ರತಿನಿಧಿಗಳು ಸರಕಾರದ ಗಮನ ಸೆಳೆಯುವ ಅನಿವಾರ್ಯತೇ ಇದೆ. ತುಳು ಭಾಷೆಯಲ್ಲಿ ಶಿಕ್ಷಣ ಸಿಗುವಂತಾದರೆ ತುಳು ಭಾಷೆ ಶೈಕ್ಷಣಿಕ ಭಾಷೆಯಾಗಿ ಇನ್ನಷ್ಟು ಪ್ರಗತಿಯಾಗಲಿದೆ.

ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಬಳಿ ತುಳುವನ್ನು ಹೊಸ ಶಿಕ್ಷಣ ನೀತಿಯಲ್ಲಿ ಸೇರಿಸುವ ಬಗೆಗೆ ಮನವಿ ಮಾಡಬೇಕಾಗಿದೆ ಇದಕ್ಕಾಗಿ ಆಗಸ್ಟ್ 16ನೇ ತಾರೀಕಿನಂದು ಜೈ ತುಳುನಾಡ್ ಸಂಘಟನೆಯು ಟ್ವೀಟ್ ಅಭಿಯಾನ ಆಯೋಜಿಸಿದೆ. ಈ ಅಭಿಯಾನದಲ್ಲಿ ಸರ್ವ ತುಳುವರು ತುಳು ಅಭಿಮಾನಿಗಳು ಪಾಲ್ಗೊಂಡು #EducationInTulu ಎಂಬ ಹ್ಯಾಸ್ ಟ್ಯಾಗ್ ನಲ್ಲಿ ಟ್ವೀಟ್ ಮಾಡಿ ಜನಪ್ರತಿನಿಧಿಗಳನ್ನ ಎಚ್ಚರಿಸುವ ಜೊತೆಗೆ ಜನಜಾಗೃತಿ ಆಗಬೇಕು ಎಂದು ಜೈ ತುಳುನಾಡ್ (ರಿ.) ಸಂಘಟನೆಯ ಅಧ್ಯಕ್ಷರಾದ ಸುದರ್ಶನ ಸುರತ್ಕಲ್ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply