ಗ್ಯಾಸ್ ಟ್ರಬಲ್

ನವದೆಹಲಿ: ಮನೆ ಬಳಕೆಯ ಅಡುಗೆ ಅನಿಲದ ಮೇಲಿನ ಸಬ್ಸಿಡಿ ಇನ್ನು ಮುಂದೆ ಗ್ರಾಹಕರ ಬ್ಯಾಂಕ್ ಖಾತೆಗೆ ಜಮಾ ಆಗುವು ದಿಲ್ಲ. ಕಾರಣ ಸಬ್ಸಿಡಿಯನ್ನು ಸಂಪೂರ್ಣ ವಾಗಿ ರದ್ದುಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಕೋವಿಡ್ ಕಾರಣದಿಂದಾಗಿ ಜಾಗತಿಕ ಮಟ್ಟದಲ್ಲಿ ತೈಲೋತ್ಪನ್ನಗಳ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇನ್ನೊಂದೆಡೆ, ತೈಲೋತ್ಪನ್ನಗಳಿಂದ ಬರಬೇಕಾದ ತೆರಿಗೆ ಆದಾಯ ಕುಸಿಯದಂತಿರಲು ಸರ್ಕಾರ ನಿಯಮಿತವಾಗಿ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆಯನ್ನು ಹೆಚ್ಚಿಸುತ್ತಲೇ ಬಂದಿದೆ.

ಈ ಕಾರಣದಿಂದಾಗಿ ಸದ್ಯ ಗೃಹ ಬಳಕೆಗೆ ನೀಡಲಾಗುತ್ತಿರುವ ಸಬ್ಸಿಡಿ ಅಡುಗೆ ಅನಿಲದ ದರ ಹಾಗೂ ಮಾರುಕಟ್ಟೆಯ ಬೆಲೆ ಒಂದೇ ಆಗಿದೆ. ಈ ಕಾರಣದಿಂದಾಗಿ ಸಬ್ಸಿಡಿ ನೀಡು ವುದನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಸೆ.1ರಂದು ಸಬ್ಸಿಡಿರಹಿತ ಹಾಗೂ ಸಬ್ಸಿಡಿಸಹಿತ ಅಡುಗೆ ಅನಿಲದ 14.2 ಕೆಜಿ ಸಿಲಿಂಡರ್ ಬೆಲೆ 594 ರೂ. ಆಗಿತ್ತು. ಹೀಗಾಗಿ ವ್ಯತ್ಯಾಸದ ಹಣವನ್ನು ಗ್ರಾಹಕರ ಖಾತೆಗೆ ವರ್ಗಾಯಿಸುವ ಪ್ರಶ್ನೆಯೇ ಉದ್ಭವಿಸು ವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಈ ನಿರ್ಧಾರದಿಂದಾಗಿ ಸರ್ಕಾರಕ್ಕೆ ಕನಿಷ್ಠ 20 ಸಾವಿರ ಕೋಟಿ ರೂ.ಗಳ ಉಳಿತಾಯ ವಾಗಲಿದೆ ಎಂದು ಅಂದಾಜಿಸಲಾಗಿದೆ.

Leave a Reply