ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರುಷದ ಅವಧಿ ಪೂರ್ಣಗೊಂಡ ಹಿನ್ನಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ ಹಾಗೂ ಎಲ್ಲಾ ಮೋರ್ಚಾದ ಪಧಾಧಿಕಾರಿಗಳು ಇಂದು ಕುಂದಾಪುರದಲ್ಲಿ 70 ಕ್ಕೂ ಹೆಚ್ಚು ಸಸಿಗಳನ್ನು ನೆಡುವುದರ ಮೂಲಕ ಸಂಭ್ರಮ ಆಚರಿಸಿದರು.
ಕಾರ್ಯಕ್ರಮದಲ್ಲಿ ಕುಂದಾಪುರದ ಕ್ಷೇತ್ರಾಧ್ಯಕ್ಷ ಶಂಕರ್ ಅಂಕದಕಟ್ಟೆ, ಮಂಡಲ ಪ್ರಧಾನಕಾಯದರ್ಶಿ ಸತೀಶ್ ಪೂಜಾರಿ ವಕ್ವಾಡಿ, ಸುರೇಶ್ ಶೆಟ್ಟಿ ಗೋಪಾಡಿ ,ಜಿಲ್ಲಾ ಕಾರ್ಯದರ್ಶಿ ಸದಾನಂದ ಬಳ್ಕೂರು, ಶ್ರೀಮತಿ ಗುಣರತ್ನ, ಜಿಲ್ಲಾ ಯುವಮೊರ್ಚಾ ಪ್ರಮುಖ ವಿನೋದ್ ರಾಜ್ ಶಾಂತಿನಿಕೇತನ, ಕುಂದಾಪುರ ಯುವ ಮೋರ್ಚಾ ಅಧ್ಯಕ್ಷ ಅವಿನಾಶ್ ಉಳ್ತೂರು, ರೈತಮೋರ್ಚಾ ಅಧ್ಯಕ್ಷ ಸುನಿಲ್ ಶೆಟ್ಟಿ ಹೇರಿಕುದ್ರು, ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗೋಪಾಲ್ ಕಳಂಜೆ, ಎಸ್ ಟಿ ಮೋರ್ಚಾ ಅಧ್ಯಕ್ಷ ಪ್ರವೀಣ್ ವಕ್ವಾಡಿ, ಮಹಿಳಾಮೋರ್ಚಾ ಅಧ್ಯಕ್ಷ ರೂಪಾ ಪೈ, ಹಿಂದುಳಿದ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸುಧೀರ್ ಕೆ ಎಸ್ , ಅಲ್ಪಸಂಖ್ಯಾತ್ ಮೋರ್ಚಾ ಕುಂದಾಪುರ ಅಧ್ಯಕ್ಷರ ಫಿರೋಜ್ ಕೋಡಿ ಹಾಗೂ ಪಕ್ಷದ ಎಲ್ಲಾ ಪಧಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.






