ಗಾನ ನಿಲ್ಲಿಸಿದ ಗಾನ ಗಂಧರ್ವ ಎಸ್. ಪಿ. ಬಿ

ಚೆನ್ನೈ: ಗಾನಲೋಕದ ಗಂಧರ್ವ, ಸಂಗೀತ ಪ್ರಿಯರ ಹೃದಯ ಸಾಮ್ರಾಟ, ಬಹುಭಾಷಾ ಗಾಯಕ, ಪದ್ಮಶ್ರೀ, ಪದ್ಮಭೂಷಣ ಎಸ್.ಪಿ ಬಾಲಸುಬ್ರಹ್ಮಣ್ಯಂ ಶುಕ್ರವಾರ ಮಧ್ಯಾಹ್ನ ವಿಧಿವಶರಾಗಿದ್ದಾರೆ.


ವಿವಿಧ ಭಾಷೆಗಳಲ್ಲಿ 40 ಸಾವಿರಕ್ಕೂ ಅಧಿಕ ಹಾಡುಗಳಿಗೆ ಧ್ವನಿ ನೀಡಿ, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ತನ್ನದೇ ಸ್ವರ್ಣ ಪುಟ ತೆರಿದಿರುವ ಈ ಹಿರಿಯ ಗಾಯಕನಿಗೆ 74 ವರ್ಷ ವಯಸ್ಸಾಗಿತ್ತು.

ಬಹು ದಿನಗಳದಿಂದ ಅನಾರೋಗ್ಯದ ಸಮಸ್ಯೆಗೆ ತುತ್ತಾಗಿದ್ದ ಅವರು ಮತ್ತೆ ಚೇತರಿಸಿ ಬರುತ್ತಾರೆ ಎಂಬ ಕೋಟ್ಯಾಂತರ ಅಭಿಮಾನಿಗಳ ನಿರೀಕ್ಷೇಯನ್ನು ಹುಸಿ ಗೊಳಿಸಿ ಕಾಣದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.


ಅ. 5ರಂದು ಕೊರೋನಾ ಸೋಂಕು ತಗುಲಿದ್ದರಿಂದ ಎಸ್.ಪಿ.ಬಿ ಅವರು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ತುಂಬಾ ದಿನಗಳ ಹೋರಾಟದ ಬಳಿಕ ಅವರಿಗೆ ಕೊರೋನಾ ವರದಿ ನೆಗೆಟಿವ್ ಆಗಿತ್ತು. ಆದರೂ ಕೂಡ ಅವರಿಗೆ ಇತರೆ ಅನಾ ರೋಗ್ಯದ ಸಮಸ್ಯೆಯ ಕಾರಣದಿಂದಾಗಿ ಚಿಕಿತ್ಸೆ ನೀಡಲಾಗುತ್ತಿತ್ತು.

ಇನ್ನೇನು ಎಸ್ಪಿ.ಬಿ ಅವರು ಚೇತರಿಸಿ ಕೊಳ್ಳುತ್ತಾರೆ ಎಂಬ ಭರವಸೆ ಮೂಡಿತ್ತು. ಆದರೆ ಅಂತಿಮವಾಗಿ ಅವರು ಕೊನೆಯು ಸಿರೆಳಿದರುವುದು ಕೋಟ್ಯಂತರ ಅಭಿಮಾನಿ ಗಳಿಗೆ ನೋವುಂಟು ಮಾಡಿದೆ. ಎಸ್ ಪಿ ಬಿ ನಿಧನಕ್ಕೆ ಸಿನಿಮಾ ಕ್ಷೇತ್ರದ ಗಣ್ಯರು, ರಾಜಕೀಯ ಗಣ್ಯರು, ಅಭಿಮಾನಿಗಳು, ಸ್ನೇಹಿತರು, ಎಲ್ಲರೂ ಕಂಬನಿ ಮಿಡಿದಿದ್ದಾರೆ.
ಅವರು ಪುತ್ರ ಚರಣ್, ಪುತ್ರಿ ಪಲ್ಲವಿ ಮತ್ತು ಪತ್ನಿ ಸಾವಿತ್ರಿ ಅವರ ಸಹಿತ ಭಾರಿ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ.

 
 
 
 
 
 
 
 
 
 
 

Leave a Reply