Janardhan Kodavoor/ Team KaravaliXpress
28.6 C
Udupi
Monday, December 5, 2022
Sathyanatha Stores Brahmavara

ಖುದ್ದು ಸ್ಥಳದಲ್ಲಿದ್ದು ಹೆದ್ದಾರಿ ದುರಸ್ತಿಗೈದ ಶಾಸಕ ಹಾಲಾಡಿ

ಕುಂದಾಪುರ: ಅಸಮರ್ಪಕ ಕಾಮಗಾರಿಯಿಂದಾಗಿ  ಮಳೆ ನೀರು ನಿಂತು ಕೆರೆಯಂತಾಗಿದ್ದ ರಾಷ್ಟ್ರೀಯ ಹೆದ್ದಾರಿಯನ್ನು ಸ್ವತಃ ಶಾಸಕರೇ ಖುದ್ದು ದುರಸ್ತಿಗೊಳಿಸಿದ ಘಟನೆ ಇಲ್ಲಿನ ಮೂರುಕೈ ಬಳಿ ನಡೆದಿದೆ.

ಎನ್ ಎಚ್ 66ರ ಮೂರುಕೈ ವಿನಾಯಕ ಟಾಕೀಸ್ ಬಳಿ ರಸ್ತೆಯಲ್ಲಿ ನೀರು ನಿಂತು ಜನ. ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.

ಜನರ ಮನವಿಗೆ ಸ್ಪಂದಿಸಿದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸ್ಥಳಕ್ಕಾಗಮಿಸಿ, ಎನ್‌ಎಚ್ ಅಧಿಕಾರಿಗಳನ್ನು ಕರೆಸಿ ತರಾಟೆಗೆ ತೆಗೆದುಕೊಂಡರು.

 

ಸುಮಾರು 4 ಗಂಟೆ ಕಾಲ ಸ್ಥಳದಲ್ಲೇ ಮೊಕ್ಕಾಂ ಹೂಡಿ ಚರಂಡಿ ದುರಸ್ತಿ ಮಾಡಿಸಿದ ಶಾಸಕ ಹಾಲಾಡಿ, ಸರಾಗವಾಗಿ.ನೀರು ಹರಿದುಹೋಗುವಂತೆ ಮಾಡಿಸಿದರು. ಆ ಮೂಲಕ ಸಾರ್ವಜನಿಕ ಪ್ರಶಂಸೆಗೆ ಪಾತ್ರರಾದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!