ಕಾಳುಮೆಣಸು ಸೊರಗು ರೋಗ ನಿರ್ವಹಣೆ ಮಾಹಿತಿ


ಉಡುಪಿ: ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ವತಿಯಿಂದ ಈಚೆಗೆ ಸಂತೆಕಟ್ಟೆ ಸದಾನಂದ ನಾಯ್ಕ ಮನೆ ವಠಾರದಲ್ಲಿ ಕಾಳುಮೆಣಸಿನಲ್ಲಿ ಶೀಘ್ರ ಸೊರಗು ರೋಗದ ನಿರ್ವಹಣೆ ಮುಂಚೂಣಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.
ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಬಿ. ಧನಂಜಯ, ಕಾಳುಮೆಣಸು ಬೆಳೆ ಮತ್ತು ಶೀಘ್ರ ಸೊರಗು ರೋಗದ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಕೀಟಶಾಸ್ತ್ರಜ್ಞ ಡಾ. ಸಚಿನ್ ಯು. ಎಸ್., ಶೀಘ್ರ ಸೊರಗು ರೋಗ ಲಕ್ಷಣ ಹಾಗೂ ಅದರ ಸಮಗ್ರ ನಿರ್ವಹಣೆಯಲ್ಲಿ ಟ್ರೈಕೋಡರ್ಮಾ, ಸೂಕ್ಷ್ಮಾಣು ಜೀವಿಗಳ ಸಮ್ಮಿಶ್ರಣ, ಪೊಟಾಷಿಯಂ ಫಾಸ್ಪೊನೇಟ್ ಬೇವಿನ ಹಿಂಡಿ ಬಳಕೆ ಬಗ್ಗೆ ತಿಳಿಸಿದರು.
ಆಯ್ದ ರೈತರಿಗೆ ಕೇಂದ್ರದ ವತಿಯಿಂದ ಶೀಘ್ರ ಸೊರಗು ರೋಗ ನಿರ್ವಹಣೆ ನಿರ್ಣಾಯಕ ಪರಿಕರ ವಿತರಿಸಲಾಯಿತು. ಟ್ರೈಕೋಡರ್ಮಾ ಬಳಕೆ ಕ್ರಮದ ಪ್ರಾತ್ಯಕ್ಷಿಕೆಯನ್ನು ರೈತರಿಂದಲೇ ಮಾಡಿಸಲಾಯಿತು.
ಇದೇ ಸಂದರ್ಭದಲ್ಲಿ ಕೊಕ್ಕೊ ಮತ್ತು ಗೇರು ಬೆಳೆಯಲ್ಲಿ ಚೌಟಣಿ ಮಾಡುವ ಕ್ರಮದ ಪ್ರಾತ್ಯಕ್ಷಿಕೆ ನೀಡಲಾಯಿತು.
ಸದಾನಂದ ನಾಯ್ಕ ಅವರು ಸಮಗ್ರ ಕೃಷಿ ಪದ್ಧತಿಯಲ್ಲಿ ಕಾಡುಪ್ರಾಣಿಗಳ ತಡೆಗೆ ಅಳವಡಿಸಿಕೊಂಡ ಕಂದಕಗಳ ಮಾದರಿ, ಹೈನುಗಾರಿಕೆ, ಬಯೊಡೈಜೆಸ್ಟರ್, ಸ್ಲರಿ ಘಟಕ, ಗೋಬರ್ ಗ್ಯಾಸ್ ಘಟಕ ಹಾಗೂ ವಿವಿಧ ಬೆಳೆಗಳ ತಾಕುಗಳಿಗೆ ಭೇಟಿ ನೀಡಲಾಯಿತು.

Leave a Reply