ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಆದೇಶ ಪಾಲಿಸಿ

      ಉಡುಪಿ: ಕೋವಿಡ್ ೧೯ ಸೋಂಕಿನಿAದ ಮೃತಪಟ್ಟ ಮುಸ್ಲಿಮರ ಶವವನ್ನು ಖಬರಸ್ತಾನಗಳಲ್ಲೇ ದಫನ ಮಾಡಬೇಕು. ಅದಕ್ಕೆ ಯಾವುದೇ ಅಡ್ಡಿ ಉಂಟುಮಾಡಬಾರದು ಎಂಬ ಆದೇಶವನ್ನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಹೊರಡಿಸಿದೆ. ಉಡುಪಿ ಜಿಲ್ಲೆಯ ಮುಸಲ್ಮಾನರೂ ಅದನ್ನು ಪಾಲಿಸಬೇಕು ಎಂದು ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ದಾವೂದ್ ಅಬೂಬಕರ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ೧೯ನಿಂದ ಮುಸ್ಲಿಮರು ಮೃತಪಟ್ಟಲ್ಲಿ ಅವರಿಗೆ ಗೌರವಯುತವಾಗಿ ಆಯಾಯ ಮಸೀದಿಗಳಲ್ಲೇ ಅಂತಿಮ ಸಂಸ್ಕಾರ ನಡೆಸಬೇಕು. ಅದನ್ನು ನಿರಾಕರಿಸಿದರೆ ಖಬರಸ್ತಾನ ಆಡಳಿತ ಮಂಡಳಿ, ಮುತವಲ್ಲಿಗಳು ಅಥವಾ ಆಡಳಿತಾಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದವರು ಎಚ್ಚರಿಸಿದ್ದಾರೆ.
ಮೃತರ ಮನೆಗೆ ಭೇಟಿ, ಅವರ ಅಂತಿಮ ನಮಾಜ್ ಸಹಿತ ದಫನ ಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯ ಎಂದು ಶೆರಿಯತ್ ನಿಯಮ ಹೇಳುತ್ತದೆ. ಅದನ್ನೆಲ್ಲ ಗಮನದಲ್ಲಿಟ್ಟುಕೊಂಡು ದಫನ ಮಾಡಲು ಆಕ್ಷೇಪಿಸಿದ ಸಮಿತಿಗಳ ವಿರುದ್ಧ ಕ್ರಮ ಕೈಗೊಳ್ಳಲು ವಕ್ಫ್ ಮಂಡಳಿ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ ಎಂದು ದಾವೂದ್ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply