ಕರಾವಳಿ ಜಿಲ್ಲೆಗಳಲ್ಲಿ ಎನ್‍ಸಿಸಿ ವಿಸ್ತರಣೆ

ದೇಶದ 173 ಗಡಿ ಪ್ರದೇಶ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಎನ್‍ಸಿಸಿ ಯನ್ನು ವಿಸ್ತರಿಸುವ ಪ್ರಸ್ತಾಪಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಅನುಮೋದನೆ ನೀಡಿದ್ದಾರೆ. 
ದೇಶದ ಗಡಿ ಪ್ರದೇಶ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಎನ್‍ಸಿಸಿ ಯನ್ನು ವಿಸ್ತರಿಸಲಾಗುವುದು.

ಇದರಿಂದಾಗಿ ಈ ಪ್ರದೇಶಗಳಲ್ಲಿ ವಿಪತ್ತು ನಿರ್ವಹಣೆಗಾಗಿ ಮಾನವ ಶಕ್ತಿ ವೃದ್ಧಿಸ ಬಹುದು. ಅಲ್ಲದೆ ಸೇನೆಯಲ್ಲಿ ತಮ್ಮ ವೃತ್ತಿ ಜೀವನವನ್ನು ರೂಪಿಸಲು ಕೌಶಲ್ಯ ತರಬೇತಿ ದೊರೆದಂತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ಎನ್‍ಸಿಸಿಗಾಗಿ ಗಡಿ ಪ್ರದೇಶ ಮತ್ತು ಕರಾವಳಿ ಜಿಲ್ಲೆಗಳಲ್ಲಿ 1,000 ಕ್ಕೂ ಹೆಚ್ಚು ಶಾಲೆಗಳನ್ನೂ ಗುರುತಿಸಲಾಗಿದೆ. ಇಲ್ಲಿಂದ 1 ಲಕ್ಷಕ್ಕೂ ಹೆಚ್ಚು ಕೆಡೆಟ್ ಗಳನ್ನು ನೇಮಕಾತಿ ಮಾಡಲಾಗುವುದು ಅವರಲ್ಲಿ ಮೂರನೇ ಒಂದು ಭಾಗದಷ್ಟು ಯುವತಿಯರು ಇರಲಿದ್ದಾರೆ. ಒಟ್ಟು 83 ಎನ್‍ಸಿಸಿ ಘಟಕಗಳನ್ನು ಮೇಲ್ದರ್ಜೆಗೇರಿ ಸಲಾಗುವುದು ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.

Leave a Reply