ಕಮಲಾ ಹ್ಯಾರಿಸ್ ವಿರುದ್ಧ ಟ್ರಂಪ್ ವಾಗ್ದಾಳಿ

ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಯಾಗಿರುವ ಕಮಲಾ ಹ್ಯಾರಿಸ್ ವಿರುದ್ಧ ವಾಗ್ದಾಳಿಯನ್ನು ಟ್ರಂಪ್ ಮುಂದುವ ರಿಸಿದ್ದಾರೆ. ಕಮಲಾರಿಗಿಂತ ಅರ್ಹ ಭಾರತೀಯರನ್ನು ಡೆಮಾಕ್ರಟಿಕ್ ಪಕ್ಷ ಆಯ್ಕೆ ಮಾಡಬಹುದ್ದಿತ್ತು. ಆ ಪಕ್ಷ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ಗಿಂತ ಕಮಲಾ ಹೆಚ್ಚು ಕೆಟ್ಟವರು. ಆಕೆಗಿಂತಲೂ ಹೆಚ್ಚು ಭಾರತೀ ಯರ ಬೆಂಬಲ ನನಗಿದೆ’ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.

ಜೋ ಬಿಡೆನ್ ಒಬ್ಬ ಚೆಲ್ಲಾಟದ ಚೆಲುವೆಯನ್ನು (ಪೊಕಾಹೊಂಟಾಸ್) ಆಯ್ಕೆ ಮಾಡಿರಬಹುದೆಂದು ಭಾವಿಸುತ್ತೇನೆ ಎಂದೂ ಪ್ರತಿಕ್ರಿಯಿಸಿದ್ದಾರೆ. ಆಕೆ ಬಿಡೆನ್​ರನ್ನು ತುಂಬಾ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದೂ ಹಲವು ಚರ್ಚೆಗಳನ್ನು ಉಲ್ಲೇಖಿಸಿ ಟ್ರಂಪ್ ಟೀಕಿಸಿದ್ದಾರೆ.

Leave a Reply