ಎಸ್.ಬಿ.ಐ ಗ್ರಾಹಕರಿಗೊಂದು ಹೊಸ ಸುದ್ದಿ

ಹೊಸದಿಲ್ಲಿ: ಇಲ್ಲಿಯ ತನಕ ಬ್ಯಾಂಕ್ ಗ್ರಾಹಕರಿಗೆ ಎಟಿಎಂ ನಿಂದ ಹಣ ಪಡೆಯಲು ಪಿನ್ ನಂಬರ್ ಇದ್ದರೆ ಸಾಕಿತ್ತು, ಕಾರ್ಡ್ ಮಿತಿಯಂತೆ ಹಣ ಪಡೆಯಬಹುದಿತ್ತು.

ಆದರೆ ಇದೀಗ ಬ್ಯಾಂಕ್ ಗ್ರಾಹಕರ ಖಾತೆ ಭದ್ರತೆಗೊಳಿಸುವ ಯೋಚನೆಯಲ್ಲಿ, ಇಂದಿನಿಂದ 10 ಸಾವಿರ ಮೇಲಿನ ಹಣ ವಿತ್ ಡ್ರಾ ಮಾಡಲು, ಒಟಿಪಿ ಕಡ್ಡಾಯವಾಗಿದೆ. ಇದು ತುಸು ಹೊಸತಾಗಿ ಕಂಡರು ಈ ನಿಯಮವನ್ನು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿ ಐ) ಇಂದಿನಿಂದ ಜಾರಿಗೆ ತಂದಿದೆ. ಎಸ್ ಬಿ ಐ ಎಟಿಎಂ ಬಳಸುವಂತಹ ಗ್ರಾಹಕರು ಎಟಿಎಂ ನಿಂದ 10 ಸಾವಿರ ಮೇಲಿನ ಹಣ ಡ್ರಾ ಮಾಡುವುದ್ದಿದ್ದರೆ , ಗ್ರಾಹಕರ ಬ್ಯಾಂಕ್ ಖಾತೆಗೆ ಒಟಿಪಿ ಬರಲಿದೆ.

ಎಟಿಎಂನಲ್ಲಿ ಗ್ರಾಹಕರಿಗೆ ಬರುವಂತಹ ಒಟಿಪಿ ಸಂಖ್ಯೆಯನ್ನು ಎಟಿಎಂ ಪಿನ್ ನ ನಂತರದಲ್ಲಿ ನಮೂದಿಸಿ ಹಣವನ್ನು ತೆಗೆದುಕೊಳ್ಳಬಹುದು.

 
 
 
 
 
 
 
 
 

Leave a Reply