ಉಡುಪಿ ಜಿಲ್ಲೆಯಲ್ಲಿ 125 ಮಂದಿ ಗುಣಮುಖ

ಉಡುಪಿ: ಜಿಲ್ಲೆಯಲ್ಲಿ ಭಾನುವಾರ 125 ಮಂದಿ ಗುಣಮುಖರಾಗಿ ಆಸ್ಪತೆಯಿಂದ ಬಿಡುಗಡೆಗೊಂಡಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಗುಣಮುಖರಾದವರ ಒಟ್ಟು ಸಂಖ್ಯೆ 2,133 ತಲುಪಿದೆ. ಪ್ರಸ್ತುತ ಜಿಲ್ಲೆಯಲ್ಲಿ 1,241 ಸಕ್ರಿಯ ಪ್ರಕರಣಗಳಿವೆ. 626 ಮಂದಿ ಮನೆ ಚಿಕಿತ್ಸೆಯಲ್ಲಿದ್ದಾರೆ.
ಇಂದು 169 ಹೊಸ ಪ್ರಕರಣ ಪತ್ತೆಯಾಗಿದ್ದು, ಆ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 3,387ಕ್ಕೆ ತಲುಪಿದೆ. ಅವರಲ್ಲಿ ಉಡುಪಿ 86, ಕುಂದಾಪುರ 31 ಮತ್ತು ಕಾರ್ಕಳದ 52 ಮಂದಿ ಇದ್ದಾರೆ. ಅವರಲ್ಲಿ ಪುರುಷರು 106, ಮಹಿಳೆಯರು 63 ಮಂದಿ.
ಇಂದು 34 ಮಂದಿ ಐಸೊಲೇಶನ್ ವಾರ್ಡಿಗೆ ದಾಖಲಾಗಿದ್ದಾರೆ. 12 ಮಂದಿ ಬಿಡುಗಡೆಗೊಂಡಿದ್ದಾರೆ. 912 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ. ಇಂದು ಲಭ್ಯ ವರದಿ ಪೈಕಿ 912 ನೆಗೆಟಿವ್ ವರದಿ ಬಂದಿದೆ. ಇನ್ನೂ 564 ವರದಿ ಬಾಕಿ ಇದೆ ಎಂದು ಡಿಎಚ್‌ಓ ಡಾ. ಸೂಡ ತಿಳಿಸಿದ್ದಾರೆ.

ಈರ್ವರ ಸಾವು
ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಈರ್ವರು ಸಾವನ್ನಪ್ಪಿದ್ದಾರೆ. ಆ ಮೂಲಕ ಕೊರೊನಾ ಪೀಡಿತರಾಗಿ ಜಿಲ್ಲೆಯಲ್ಲಿ ಒಟ್ಟು 16 ಮಂದಿ ಸಾವನ್ನಪ್ಪಿದಂತಾಗಿದೆ. ಬೈಂದೂರಿನ 60 ವರ್ಷ ಪ್ರಾಯ ಹಾಗೂ ಕುಕ್ಕಿಕಟ್ಟೆಯ 63 ವರ್ಷದ ವ್ಯಕ್ತಿಗಳೀರ್ವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ವಿವಿಧ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ದಾಖಲಾಗಿದ್ದು, ಅವರಿಗೆ ಕೊರೊನಾ ಪೊಸಿಟಿವ್ ಸೋಂಕು ಪತ್ತೆಯಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

 
 
 
 
 
 
 
 
 
 
 

Leave a Reply