ಉಡುಪಿಯ ರಕ್ಷಣೆಗೆ ಮತ್ತೊಂದು ಎನ್ ಡಿಆರ್ ಎಫ್ ತಂಡ ಹಾಗು 2 ಹೆಲಿಕ್ಯಾಪ್ಟರ್ ಗಳು

ಉಡುಪಿ: ಉಡುಪಿಯಲ್ಲಿ ಜಿಲ್ಲೆಯಾದ್ಯಂತ ನಿಲ್ಲದ ವರುಣ ಆರ್ಭಟಕ್ಕೆ ಹಲವಾರು ತಗ್ಗುಪ್ರದೇಶಗಳಲ್ಲಿನ ಮನೆಗಳು, ಕಟ್ಟಡಗಳು ಮುಳುಗಡೆಯಾಗಿವೆ. ಜನರ ರಕ್ಷಣಾ ಕಾರ್ಯಕ್ಕೆ ಹೆಚ್ಚಿನ ಎನ್ ಡಿಎ ಆರ್ ಎಫ್ ಪಡೆಯನ್ನು ಕಳಿಸಿಕೊಡುವಂತೆ ಸಂಸದೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಕಡಿಮೆಯಾಗುವ ಸೂಚನೆ ಕಂಡುಬರದ ಕಾರಣ ಪ್ರವಾಹ ಭೀತಿ ಉಂಟಾಗಿದೆ. ಇದರಿಂದ ಕಾರ್ಯಾಚರಣೆ ಚುರುಕು ಗೊಳಿಸಬೇಕು ಇದಕ್ಕಾಗಿ ಹೆಚ್ಚಿನ ನೆರವು, ಸಹಾಯ ನೀಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್ ಭಾಸ್ಕರ್ ಅವರಿಗೆ ಸಂಸದರೆಂದರೆ ಕೋರಿಕೆ ಸಲ್ಲಿಸಿದ್ದಾರೆ.

ಈಗಾಗಲೇ ಅಪಾಯದ ಪ್ರದೇಶದಲ್ಲಿರುವ ಜನರ ನೆರವಿಗೆ ಮಂಗಳೂರಿನಿಂದ ಒಂದು ಎನ್ ಡಿ ಆರ್ ಎಫ್ ತಂಡ ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.

ಇನ್ನೂ ಹೆಚ್ಚಿನ ಅವಶ್ಯಕತೆ ಇರುವ ಕಾರಣ 20 ಜನರನ್ನೊಳಗೊಂಡ ಮೈಸೂರಿನ ಇನ್ನೊಂದು ಎನ್ ಡಿಎ ಆರ್ ಎಫ್ ತಂಡ ವನ್ನು ಈಗಾಗಲೇ ಕಳಿಸಿಕೊಡಲಾಗಿದೆ. ಇಷ್ಟಲ್ಲದೆ ಸಂಸದರ ಮನವಿಯಂತೆ ಜನರ ರಕ್ಷಣೆಗೆ ಬೆಂಗಳೂರು ಹಾಗೂ ಕಾರವಾರ ಕೇಂದ್ರದಿಂದ ಹೆಲಿಕ್ಯಾಪ್ಟರ್ ಗಳನ್ನು ಕೆಲವೇ ಗಂಟೆಗಳಲ್ಲಿ ಕಳುಹಿಸಿಕೊಡಲಾಗುವುದು ಎಂಬ ಮಾಹಿತಿ ಮುಖ್ಯ ಕಾರ್ಯದರ್ಶಿ ಯವರು ನೀಡಿದ್ದಾರೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆಯವರು ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಧಿಕಾರಿಯೊಂದಿಗೂ ಚರ್ಚಿಸಿ ಅಗತ್ಯ ವಿರುವ ಪರಿಹಾರಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಇನ್ನೇನು ಹೆಲಿಕ್ಯಾಫ್ಟರ್ ಗಳು ಕೆಲವೇ ತಾಸುಗಳಲ್ಲಿ ಉಡುಪಿಯ ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ಭಾಗಿಯಾಗಲು ಬರಲಿವೆ ಎಂದು ಸಂಸದೆ ತಿಳಿಸಿದ್ದಾರೆ.

 
 
 
 
 
 
 
 
 

Leave a Reply