ಉಡುಪಿಯಲ್ಲಿ 422 ನೆಗೆಟಿವ್, 23 ಮಂದಿ ಬಿಡುಗಡೆ

ಉಡುಪಿಯಲ್ಲಿ 109 ಹೊಸ ಪ್ರಕರಣ ಪತ್ತೆ

ಜಿಲ್ಲೆಯಲ್ಲಿ ಮಂಗಳವಾರ 109 ಹೊಸ ಕೋವಿಡ್-19 ಪ್ರಕರಣ ಪತ್ತೆಯಾಗಿದೆ. ಆ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 3,722ಕ್ಕೆ ತಲುಪಿದೆ. ಜಿಲ್ಲೆಯಲ್ಲಿ ಈಚೆಗೆ 6 ಮಂದಿ ಸಾವನ್ನಪ್ಪಿದ್ದು ಜಿಲ್ಲೆಯ ಒಟ್ಟು ಕೋವಿಡ್ ಸೋಂಕಿತ ಮರಣ ಸಂಖ್ಯೆ 22ಕ್ಕೆ ತಲುಪಿದೆ.
ಇದೇ ವೇಳೆ 2,239 ಮಂದಿ ಗುಣಮುಖರಾಗಿದ್ದು, ಪ್ರಸ್ತುತ 1,461 ಸಕ್ರಿಯ ಪ್ರಕರಣಗಳಿವೆ.
ಇಂದು 10 ಮಂದಿ ಕೊರೊನಾ ಸೋಂಕಿತರೂ ಸೇರಿದಂತೆ 39 ಮಂದಿ ಐಸೊಲೇಶನ್ ವಾರ್ಡಿಗೆ ದಾಖಲಾಗಿದ್ದಾರೆ. 23 ಮಂದಿ ಬಿಡುಗಡೆಗೊಂಡಿದ್ದಾರೆ. ಇಂದು 926 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ. ಲಭ್ಯ ವೈದ್ಯಕೀಯ ವರದಿ ಪೈಕಿ 422 ನೆಗೆಟಿವ್ ಬಂದಿದೆ. ಇನ್ನೂ 671 ವರದಿ ಬಾಕಿ ಇದೆ ಎಂದು ಡಿಎಚ್ಓ ಡಾ. ಸುಧೀರಚಂದ್ರ ಸೂಡ ತಿಳಿಸಿದ್ದಾರೆ 

 

Leave a Reply