ಉಡುಪಿಯಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆ

ಉಡುಪಿ: ಯುದ್ಧರಂಗದಲ್ಲಿ ಸೈನಿಕರಿಲ್ಲದ, ಸೈನಿಕರ ಕೈಯಲ್ಲಿ ಶಸ್ತ್ರಾಸ್ತ್ರ ಇಲ್ಲದ ಪರಿಸ್ಥಿತಿ ನಮ್ಮದು ಎಂದು ಉಡುಪಿಯ ಕರ್ನಾಟಕ ಸರಕಾರಿ ವೈದ್ಯಕೀಯ ಅಧಿಕಾರಿಗಳ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಡಾ ಪ್ರಕಾಶ್ ಕುಮಾರ್ ಶೆಟ್ಟಿ ಅಳಲು ವ್ಯಕ್ತಪಡಿಸಿದ್ದಾರೆ.

ಸಾಂಕ್ರಾಮಿಕ ಕೊರೋನಾ ವೈರಸ್ ಸೋಂಕು ನಿಯಂತ್ರಿಸಲು ರಾಜ್ಯ ಸರಕಾರ ಹೆಚ್ಚು ಹೆಚ್ಚು ಕೋವಿಡ್ ಟೆಸ್ಟ್ ಮಾಡಿ ಎಂದು ಟಾರ್ಗೆಟ್ ಕೊಡುತ್ತಿದೆ. ಹಿಂದಿನ ದಿನ ಪಾಸಿಟಿವ್ ಬಂದ 10 ಪಟ್ಟು ಟೆಸ್ಟ್ ಮಾಡ ಬೇಕು ಎಂದು ಗುರಿ ನೀಡುತ್ತಿದೆ.

ಉಡುಪಿ ಜಿಲ್ಲೆಯಲ್ಲಿ ಈ ಗುರಿಯನ್ನು ತಲುಪುವುದಕ್ಕೆ ಮಾಡುವುದಕ್ಕೆ ಬಹಳ ಕಷ್ಟ ಆಗುತ್ತಿದೆ. ಕಾರಣ ಉಡುಪಿ ಜಿಲ್ಲೆಯಲ್ಲಿ ಶೇ. 40 ವೈದ್ಯಕೀಯ ಸಿಬ್ಬಂದಿ ಕೊರತೆಯಿದೆ.

ಉಡುಪಿಯಲ್ಲಿ ಈಗಾಗಲೇ ಕೋವಿಡ್ ದೃಢ ಪ್ರಕರಣಗಳ ಸಂಖ್ಯೆ 11 ಸಾವಿರದ ಗಡಿ ದಾಟಿದೆ. ಸುಮಾರು 2500ರಷ್ಟು ಸಕ್ರಿಯ ಪ್ರಕರಣಗಳಿವೆ. 1500 ಸಿಬ್ಬಂದಿಗಳ ಕೊರತೆ ಯಿಟ್ಟುಕೊಂಡು ಕೆಲಸ ಮಾಡುವುದು ಹೇಗೆ? ಹೀಗಿರುವಾಗ ಕೇವಲ ಗುರಿ ಕೊಟ್ಟರೆ ಸಾಲದು, ಕೊರೋನಾ ವಾರಿಯರ್ಸ್ ಅವ ರನ್ನು ನೇಮಿಸಿ. ಈಗಿರುವ ಸಿಬ್ಬಂದಿ ಮೇಲಿನ ಒತ್ತಡವನ್ನು ಕಡಿಮೆಮಾಡಿ ಎಂಬ ಕೂಗು ಕೇಳಿಬಂದಿದೆ.

ನಾವು ಜೀವಪಣಕ್ಕಿಟ್ಟು ಕೆಲಸ ಮಾಡುತ್ತೇವೆ, ಆದರೆ ವ್ಯವಸ್ಥೆಗಳು ಸರಿಯಾಗಿರಬೇಕು ಎಂದವರು ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply