ಉಡುಪಿಯಲ್ಲಿ ಬಕ್ರೀದ್ ಆಚರಣೆ

.ಉಡುಪಿ: ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಉಡುಪಿ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದವರು ಪ್ರಾರ್ಥನೆ ಸಲ್ಲಿಸುವುದರ ಮೂಲಕ ಶ್ರದ್ಧಾ ಭಕ್ತಿಯಿಂದ ಆಚರಿಸಿದರು

​ ಕೋವಿಡ್-19 ರ ಹಿನ್ನಲೆಯಲ್ಲಿ ಸಾಮೂಹಿಕ ಪ್ರಾರ್ಥನೆಗಳನ್ನು ಸರಕಾರ ಸೂಚಿಸಿದ ನಿಯಮಾವಳಿಗೆ ಅನುಗುಣವಾಗಿ ಕನಿಷ್ಠ ಸಂಖ್ಯೆ ಜನರು ಭಾಗವಹಿಸುವುದರೊಂದಿಗೆ ನಡೆಸಲಾಯಿತು.​ ನಗರದ ಬ್ರಹ್ಮಗಿರಿ ನಾಯರ್ ಕೆರೆ ಹಾಸೀಮಿ ಮಸೀದಿಯಲ್ಲಿ ಮೌಲಾನಾ ಹಾಸೀಮ್ ಉಮ್ರಿ ಇವರ ನೇತೃತ್ವದಲ್ಲಿ ಎರಡು ಹಂತಗಳಲ್ಲಿ ಜನರು ಭಾಗವಹಿಸುವುದರೊಂದಿಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಈದ್ ನಮಾಜ್ ನೇರವೇರಿಸಲಾಯಿತು.

ಮಸೀದಿಗೆ ಆಗಮಿಸುವವರಿಗೆ ಥರ್ಮಲ್ ಚೆಕ್ಕಿಂಗ್ ಮತ್ತು ಸ್ಯಾನಿಟೈಸರ್ ಕಡ್ಡಾಯಗೊಳಿಸಲಾಗಿತ್ತು.​ ಈ ವೇಳೆ ಪ್ರವಚನ ನೀಡಿದ ಧರ್ಮ ಗುರುಗಳು ಜೀವನದಲ್ಲಿ ಹಲವು ಸಂದರ್ಭದಲ್ಲಿ ತ್ಯಾಗ ಮಾಡುವ ಸಂದರ್ಭಗಳು ಎದುರುಗೊಳ್ಳುತ್ತವೆ, ಎಲ್ಲರ ಬದುಕು ಹಸನಾಗಲು ತ್ಯಾಗವೂ ಮುಖ್ಯ. ಕೋವಿಡ್ -19 ರ ಸಮಯದಲ್ಲಿ ಎಚ್ಚರಿಕೆಯಿಂದ ಇರಲು ಮನವಿ ಮಾಡಿದರು.​

Leave a Reply