ಉಚಿತ ಗೋ ಉತ್ಪನ್ನಗಳ ತಯಾರಿ ಮಾಹಿತಿ

ಆತ್ಮನಿರ್ಭರ ಭಾರತ ಅಭಿಯಾನದ ಅಂಗವಾಗಿ ಗ್ರಾಮ ವಿಕಾಸ ಸಮಿತಿ -( ರಾಷ್ಟ್ರೀಯ ಸ್ವಯಂಸೇವಕ ಸಂಘದ ಗತಿವಿಧಿ) 5 ದಿನಗಳ ಉಚಿತ ಗೋ ಉತ್ಪನ್ನಗಳ ತಯಾರಿ ಮಾಹಿತಿ ಕಾರ್ಯಾಗಾರ ಉಪ್ಪೂರು ಜ್ಞಾನೇಶ್ವರಿ ಸಭಾಭವನದಲ್ಲಿ ತಾರೀಕು ಆಗಸ್ಟ್ 17ರಂದು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಕೆ ರಘುಪತಿ ಭಟ್ ಅವರಿಂದ ಉದ್ಘಾಟನೆಗೊಂಡಿತು

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಮಾಹಿತಿ ಪಡೆದು ಅದನ್ನು ಉದ್ಯೋಗವಾಗಿ ಮಾಡಿಕೊಂಡಲ್ಲಿ ಕೊರೋನಾ ಸಂಕಷ್ಟದ ಸಮಯದಲ್ಲಿ ಆರ್ಥಿಕವಾಗಿ ಬಹಳಷ್ಟು ಸಹಕಾರಿ ಯಾಗಲಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಉಡುಪಿ ಜಿಲ್ಲಾ ಸೇವಾ ಪ್ರಮುಖ್ ಡಾ. ಶ್ರೀನಿವಾಸ್ ತೊಡ್ತಿಲ್ಲಾಯ, ಆತ್ಮ ನಿರ್ಭರ ಭಾರತ ಅಭಿಯಾನದ ಅಂಗವಾಗಿ ಸುಮಾರು ಹದಿನಾಲ್ಕು ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಸಂಘ ಹಮ್ಮಿಕೊಂಡಿದ್ದು ಈ ಅಭಿಯಾನ ಉಡುಪಿ ಜಿಲ್ಲೆಯಾದ್ಯಂತ ನಡೆಸಲು ತೀರ್ಮಾನಿ ಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಸ್ವಂತ ಉದ್ಯೋಗ ಮಾಡಲು ಅವಕಾಶವಿದೆ ಎಂದರು.


ವೇದಿಕೆಯಲ್ಲಿ ವಿದ್ವಾನ್ ರಾಘವೇಂದ್ರ ಭಟ್ ಬೆಲ್ಮಾರ್, ಗ್ರಾಮವಿಕಾಸ ಸಮಿತಿಯ ಜಿಲ್ಲಾ ಪ್ರಮುಖ ಜಯಂತ್ ಮಲ್ಪೆ ತರಬೇತು ದಾರ ನಾಗರಾಜ್ ಪೈ ಉಪಸ್ಥಿತರಿದ್ದರು.
ಅಜಿತ್ ಶೆಟ್ಟಿ , ಶಶಾಂಕ್ ಶಿವತ್ತಾಯ, ವಿಜಯಕುಮಾರ್ ಕೊಡವೂರು, ರಾಘವೇಂದ್ರ ಉಪ್ಪೂರು ಕಾರ್ಯಕ್ರಮ ಸಂಯೋಜನೆಯಲ್ಲಿ ಸಹಕರಿಸಿದರು

Leave a Reply