Janardhan Kodavoor/ Team KaravaliXpress
27.6 C
Udupi
Tuesday, December 6, 2022
Sathyanatha Stores Brahmavara

ಆಶಾ ಕಾರ್ಯಕರ್ತರಿಗೆ ಸ್ಯಾನಿಟೈಸರ್ , ಮಾಸ್ಕ್ ವಿತರಣೆ.


ಕಾಪು : ಜಮಾಅತೆ ಇಸ್ಲಾಮೀ ಹಿಂದ್ ಕಾಪು ವರ್ತುಲದ ವತಿಯಿಂದ, ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್ಲಾ ಆಶಾ ಕಾರ್ಯ ಕರ್ತರಿಗೆ ಮತ್ತು ವೈಧ್ಯರ ಬಳಗಕ್ಕೆ ಸ್ಯಾನಿ ಟೈಸರ್ , ಮಾಸ್ಕ್ ಮತ್ತು ಕೊರೋನಾ ಜನಜಾಗ್ರತಿಯ ಕರಪತ್ರಗಳನ್ನು ಅರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಹಂಚಲಾಯಿತು.

ಈ ಸಂದರ್ಭದಲ್ಲಿ ಜಮಾಅತ್ ನ ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ ಕಾಪು, ಆಶಾ ಕಾರ್ಯ ಕರ್ತರ ಕಾರ್ಯವೈಖರಿಗೆ ಬೆಂಬಲಿಸುವ ಮಾತುಗಳನ್ನು ಹೇಳಿ ಹುರಿದುಂಬಿಸಿದರು.


ಕೊರೋನಾ ದ ಈ ಕಾಲಘಟ್ಟದಲ್ಲಿ ನಮ್ಮ ಸೇವೆಯನ್ನು ಗುರುತಿಸಿ, ನಮಗೆ ಪ್ರೊತ್ಸಾಹ ನೀಡಿದ ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಗೆ ಪ್ರಭಾರ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಮಮತ ರವರು ಶುಭ ಕೋರಿದರು.

ಜಮಾಅತೆ ಇಸ್ಲಾಮೀ ಹಿಂದ್ ಕಾಪು ವರ್ತುಲದ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಸಾಹೇಬ್ , ಮುಹಮ್ಮದ್ ಅಲಿ ಇಬ್ರಾಹಿಮ್ , ಎಸ್. ಐ. ಓ. ಕಾಪು ವರ್ತುಲದ ಅನೀಸ್ ಅಲಿ , ಸುಗಾಮ ಕಾರರು ಸುಭಾಷಿಣಿ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!