ಅಕ್ರಮ ಜಾನುವಾರು ಸಾಗಿಸುವವರ ಬಂಧನ

       ಅಕ್ರಮ ಜಾನುವಾರು ಸಾಗಿಸುವವರ ಬಂಧನ

ಉಡುಪಿ: ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದವರನ್ನು ಕೋಟ ಪೊಲೀಸರು ದಸ್ತಗಿರಿ‌ ಮಾಡಿದ್ದಾರೆ.
ಕಂಟೈನರ್ ನಲ್ಲಿದ್ದ 59 ಎಮ್ಮೆ ಕರುಗಳನ್ನು ರಕ್ಷಿಸಲಾಗಿದೆ ಪೊಲೀಸರು ವಿಶೇಷ ರೌಂಡ್ಸ್ ನಲ್ಲಿರುವಾಗ ಈ ಅಕ್ರಮ ಬೆಳಕಿಗೆ ಬಂದಿದೆ. ಸಾಯ್ಬರಕಟ್ಟೆ ಚೆಕ್‌ಪೊಸ್ಟ್‌ ಬಳಿ ಕಾರ್ಯಾಚರಣೆ ನಡೆಸಿದ್ದು, ವಾಹನ ತಪಾಸಣೆ ಮಾಡುತ್ತಿರುವಾಗ ಶಿರಿಯಾರ ಕಡೆಯಿಂದ ಬಂದ ವಾಹನ (ಕೆಎ 55 ಎ 0244)ದ ಕಂಟೈನರ್‌ ನಲ್ಲಿ ಎಮ್ಮೆ ಕರುಗಳನ್ನು ಮೇವು, ನೀರು ನೀಡದೇ ಹಿಂಸಾತ್ಮಕ ರೀತಿಯಲ್ಲಿ ದಾಖಲಾತಿಗಳಿಲ್ಲದೇ ಸಾಗಾಟ ಮಾಡಲಾಗುತ್ತಿತ್ತು. ಮಾಂಸಕ್ಕಾಗಿ ಕೇರಳಕ್ಕೆ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಆರೋಪಿಗಳಾದ ಕೇರಳದ ಅಬ್ದುಲ್‌ ಜಬ್ಬರ್‌ (35), ಜೋಮುನ್‌ (36) ಮತ್ತು ಶಂಶುದ್ದೀನ್‌(34), ಹರ್ಯಾಣದ ಮುಖೀಮ್‌ (18) ಬಂಧನಕ್ಕೊಳಗಾಗಿದ್ದಾರೆ. ಇನ್ನೀರ್ವರು ಆರೋಪಿಗಳಾದ ಅಬ್ದುಲ್‌ ಅಜೀಜ್‌ ಮತ್ತು ಕಂಟೈನರ್ ಮಾಲಕ‌ ಮೈಸೂರಿನ ರಫೀಕ್‌ ಅವರನ್ನು ಇನ್ನಷ್ಡೆ ಬಂಧಿಸಬೇಕಿದೆ. ಪ್ರಕರಣದಲ್ಲಿ ಒಟ್ಟು 10 ಲಕ್ಷ ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ

 
 
 
 
 
 
 
 
 
 
 

Leave a Reply