ಅಂತಾರಾಷ್ಟ್ರೀಯ ವಿಮಾನ ಹಾರಾಟ ಸಡಿಲ

ನವದೆಹಲಿ: ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಳ ಹಿನ್ನೆಲೆ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ವಿಮಾನ ಹಾರಾಟವನ್ನು ಕೇಂದ್ರ ಸರ್ಕಾರ ಹಂತ ಹಂತವಾಗಿ ಸಡಿಲಗೊಳಿಸುತ್ತಿದೆ. ಭಾರತವು ದ್ವಿರಾಷ್ಟ್ರೀಯ ಮಟ್ಟದ ವಿಮಾನ ಹಾರಾಟ ಸಂಪರ್ಕಿಸುವ ಕುರಿತು 13 ದೇಶಗಳ ಜತೆಗೆ ಮಾತುಕತೆ ನಡೆಸುತ್ತಿದೆ.

ಬಹುತೇಕ ದೇಶಗಳ ನಡುವೆ ನಿರಂತರ ವಿಮಾನ ಹಾರಾಟ ಸ್ಥಗಿತಗೊಂಡಿರುವು ದರಿಂದ ಎರಡು ದೇಶಗಳ ನಡುವಿನ ಅಂತಾರಾಷ್ಟ್ರೀಯ ವಿಮಾನ ಹಾರಾಟ ಸೌಲಭ್ಯ ನಡೆಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.


ಆಸ್ಟ್ರೇಲಿಯಾ, ಇಟಲಿ, ಜಪಾನ್, ನ್ಯೂಜಿಲೆಂಡ್, ನೈಜೀರಿಯಾ, ಬಹರೇನ್, ಇಸ್ರೇಲ್, ಕೀನ್ಯಾ, ಫಿಲಿಪ್ಪೈನ್ಸ್, ರಷ್ಯಾ, ಸಿಂಗಾಪುರ್, ಸೌತ್ ಕೊರಿಯಾ ಮತ್ತು ಥಾಯ್ಲೆಂಡ್ ಸೇರಿದಂತೆ 13 ದೇಶಗಳ ಜತೆಗೆ ಜೊತೆ ದ್ವಿಪಕ್ಷೀಯ ವಿಮಾನ ಹಾರಾಟ ಏರ್ಪಡಿಸಲು ಮಾತುಕತೆ ನಡೆಸಲಾಗುತ್ತಿದೆ.


ಶ್ರೀಲಂಕಾ, ಬಾಂಗ್ಲಾದೇಶ, ಆಫ್ಘಾನಿಸ್ತಾನ, ನೇಪಾಳ ಮತ್ತು ಭೂತಾನ್ ದೇಶಗಳಿಗೆ ಈಗಾಗಲೇ ಪ್ರಸ್ತಾವ ಕಳುಹಿಸಲಾಗಿದೆ ಎಂದು ಹರ್ದೀಪ್ ಸಿಂಗ್ ತಿಳಿಸಿದ್ದಾರೆ. ಈ ಪ್ರಸ್ತಾಪದಲ್ಲಿ ಚೀನಾ ಮತ್ತು ಪಾಕಿಸ್ತಾನದ ಹೆಸರು ಇಲ್ಲ.

 
 
 
 
 
 
 
 
 

Leave a Reply