ಅಂತಾರಾಜ್ಯ ಮುಕ್ತ ಸಂಚಾರಕ್ಕೆ ಕೇಂದ್ರ ಅಸ್ತು: ಪರ್ಮಿಟ್, ಪಾಸ್ ಬೇಕಿಲ್ಲ


ಹೊಸದಿಲ್ಲಿ : ಕೋವಿಡ್ ಹಿನ್ನೆಲೆಯಲ್ಲಿ ಅಂತಾರಾಜ್ಯಗಳ ನಡುವಣ ಸರಕು ಹಾಗೂ ಪ್ರಯಾಣಿಕರ ಮುಕ್ತ ಸಂಚಾರಕ್ಕೆ ಉಂಟಾ ಗಿದ್ದ ಎಲ್ಲ ನಿರ್ಬಂಧಗಳನ್ನು ಕೇಂದ್ರ ಸರ್ಕಾರ ವೀಗ ಸಂಪೂರ್ಣ ಸಡಿಲಗೊಳಿಸಿದೆ.


ಈ ಸಂಬಂಧ ಶನಿವಾರ ಸಂಜೆ ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿ ಅಜಯ್ ಭಲ್ಲ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಸಂಬಂಧಿತ ಅಧಿಕಾರವರ್ಗಕ್ಕೆ ಅಧಿಕೃತ ಆದೇಶ ವೊಂದನ್ನು ಜಾರಿಗೊಳಿಸಿದ್ದಾರೆ.

ಇನ್ನು ಮುಂದೆ ಒಂದು ರಾಜ್ಯದಿಂದ, ಮತ್ತೊಂದು ರಾಜ್ಯಕ್ಕೆ ಪ್ರಯಾಣಿಸಲು ಯಾವುದೇ ಪರವಾನಗಿ, ಇ ಪಾಸ್ ಅಥವಾ ಪರ್ಮಿಟ್ ಬೇಕಿಲ್ಲ ಎಂದೂ ಗೃಹ ಇಲಾಖೆ ಯ ಆದೇಶದಲ್ಲಿ ಸ್ಪಷ್ಟಪಡಿ ಸಲಾಗಿದೆ. ಇಲ್ಲಿಯವರೆಗೂ ಅಂತಾರಾಜ್ಯ ಪ್ರಯಾಣಕ್ಕೆ ರಾಜ್ಯಗಳು ಇ ಪಾಸ್ ನಿಬಂಧನೆ ವಿಧಿಸಿತ್ತು.

 
 
 
 
 
 
 

Leave a Reply