ಅಕ್ಟೋಬರ್,15 ರಿಂದ ಉಡುಪಿ ಡಾ.ಟಿ.ಎಂ.ಎ.ಪೈ ಆಸ್ಪತ್ರೆಯಲ್ಲಿ ಎಲ್ಲ ಓಪಿಡಿ ಸೇವೆಗಳು ಪುನರಾರಂಭ

ಉಡುಪಿ:: ಉಡುಪಿ ನಗರ ಭಾಗದಲ್ಲಿರುವ ಡಾ ಟಿ ಎಂ ಎ ಪೈ ಆಸ್ಪತ್ರೆಯ ಎಲ್ಲ ಹೊರರೋಗಿ ವಿಭಾಗಗಳು, ಈ ಹಿಂದಿನಂತೆ ಸೇವೆಗೆ ಸಾರ್ವಜನಿಕರಿಗೆ ಸೇವೆಗೆ ಗುರುವಾರ, ದಿನಾಂಕ 15ನೇ ಅಕ್ಟೋಬರ್ 2020ರಿಂದ ಜಾರಿಗೆ ಬರುವಂತೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಲಭ್ಯವಾಗಲಿದೆ. ಆಸ್ಪತ್ರೆಯು ಮೀಸಲಾದ ಕೋವಿಡ್ -19 ಆಸ್ಪತ್ರೆಯಾಗಿ ಮುಂದುವರಿದಿದ್ದರೂ ಸಹಾ, ಹೊರರೋಗಿಗಳ ಕಟ್ಟಡ ಒಳರೋಗಿ ವಿಭಾಗದಿಂದ ಪ್ರತ್ಯೇಕವಾಗಿದೆ.

ಕೋವಿಡ್ -19 ಕ್ಕೆ ಸಂಬಂಧಿಸಿದ ಎಲ್ಲಾ ಮುನ್ನೆಚ್ಚರಿಕೆಗಳನ್ನು – ಮಾಸ್ಕ್, ದೈಹಿಕ ಅಂತರ, ನೈರ್ಮಲ್ಯೀಕರಣ ಮತ್ತು ಒಪಿಡಿ ಪ್ರದೇಶಗಳಲ್ಲಿ ಜನಸಂದಣಿಯನ್ನು ತಪ್ಪಿಸುವುದು ಸೇರಿದಂತೆ – ತೆಗೆದುಕೊಳ್ಳಲಾಗುವುದು. ಅಗತ್ಯವಿರುವವರು 7259032864 ಗೆ ಕರೆ ಮಾಡಿ ಪೂರ್ವ ಅಪಾಯಿಂಟ್ಮೆಂಟ್ ನೊಂದಿಗೆ ಈ ಸೌಲಭ್ಯವನ್ನು ಪಡೆಯಬಹುದು.

ವಯಸ್ಸಾದವರು, ಮಕ್ಕಳು ಮತ್ತು ಅವಲಂಬಿತ ರೋಗಿಗಳ ಸಂದರ್ಭದಲ್ಲಿ ಮಾತ್ರ ಇನ್ನೊಬ್ಬ ವ್ಯಕ್ತಿಯನ್ನು ಒಪಿಡಿ ಪ್ರದೇಶವನ್ನು ರೋಗಿಯೊಂದಿಗೆ ಪ್ರವೇಶಿಸಲು ಅನುಮತಿಸಲಾಗುತ್ತದೆ. ಆಸ್ಪತ್ರೆಗೆ ಪ್ರವೇಶಿಸುವ ಪ್ರತಿಯೊಬ್ಬರಿಗೂ ಮಾಸ್ಕ್ ಅವಶ್ಯಕವಿರುತ್ತದೆ ​ಎಂದು ​ವೈದ್ಯಕೀಯ ಅಧೀಕ್ಷಕ ಡಾ. ಶಶಿಕಿರಣ್ ಉಮಾಕಾಂತ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ​

 
 
 
 
 
 
 
 
 

Leave a Reply