​ ಉಡುಪಿಯ ಡಾ.ಟಿ.ಎಂ.ಎ.ಪೈ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ಹೊರರೋಗಿ ಸೇವೆ

ಉಡುಪಿ: ಉಡುಪಿಯ ಡಾ. ಟಿ.ಎಂ.ಎ ಪೈ ಆಸ್ಪತ್ರೆಯಲ್ಲಿ 10ನೇ ಜನವರಿ 2022ರ ಸೋಮವಾರದಿಂದ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ಹೊರರೋಗಿ ಸೇವೆಯು ಆರಂಭವಾಗಲಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಶಶಿಕಿರಣ್ ಉಮಾಕಾಂತ್,  ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
 
ಈ ಹೊಸ ಸೇವೆಯು ಪ್ರತಿ ಸೋಮವಾರ ಮಧ್ಯಾಹ್ನ 2.00 ರಿಂದ ಸಂಜೆ 5.00 ರವರೆಗೆ ಲಭ್ಯವಿರುತ್ತದೆ. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ  ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ  ಡಾ. ನವೀನ ಕುಮಾರ್ ಎ ಎನ್ ನೇತೃತ್ವದ ತಂಡವು ಎಲ್ಲಾ ರೀತಿಯ ಕ್ಯಾನ್ಸರ್ ಸಮಾಲೋಚನೆಗಾಗಿ ಲಭ್ಯವಿರುತ್ತದೆ.

ಕ್ಯಾನ್ಸರ್ ಕಾಯಿಲೆಯನ್ನು ಆರಂಭದಲ್ಲಿಯೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡುವುದರಿಂದ ಅದನ್ನು ಸಂಪೂರ್ಣವಾಗಿ ಗುಣಪಡಿಸುವ ಸಾಧ್ಯತೆ ಹೆಚ್ಚಾಗುತ್ತದೆ. ಈಗ ಈ ಸೇವೆಯನ್ನು ಉಡುಪಿಯಲ್ಲಿಯೇ ಆರಂಭಿಸುತ್ತಿರುವುದರಿಂದ ಸುಲಭದಲ್ಲಿಯೇ ಉಡುಪಿಯ ನಾಗರಿಕರಿಗೆ ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯ ದೊರಕಿದಂತಾಗಿದೆ. 
 
ಉಡುಪಿಯ  ಡಾ.ಟಿ.ಎಂ.ಎ ಪೈ  ಆಸ್ಪತ್ರೆಯಲ್ಲಿ ಆರಂಭಿಸಿದ  ಈ ಹೊಸ ಸೇವೆಯ  ಪ್ರಯೋಜನವನ್ನು ಸಾರ್ವಜನಿಕರು  ಪಡೆಯುವಂತೆ  ಡಾ.  ಶಶಿಕಿರಣ್ ಉಮಾಕಾಂತ್ ರವರು  ಕೋರಿದ್ದಾರೆ. ಹೆಚ್ಚಿನ ಮಾಹಿತಿ ಮತ್ತು ಪೂರ್ವ ನಿಗದಿಗಾಗಿ (For appointment) ಸಂಪರ್ಕಿಸಿ ದೂ:  7259032864 .

 
 
 
 
 
 
 
 
 
 
 

Leave a Reply