Janardhan Kodavoor/ Team KaravaliXpress
28.6 C
Udupi
Thursday, August 11, 2022
Sathyanatha Stores Brahmavara

ಸ್ವರ್ಣಾರಾಧನಾ ಅಭಿಯಾನ: ಸ್ವಣಾ೯ರತಿ ಚಾಲನೆ

ಉಡುಪಿ :-ಎಣ್ಣೆಹೊಳೆ ದೇವಾಲಯದ ಸ್ವಣಾ೯ ನದಿಯ ತಟದಲ್ಲಿ ವೈಭವದ ಸ್ವಣಾ೯ರತಿ ಕಾಯ೯ಕ್ರಮ ಡಿ.18 ಶುಕ್ರವಾರ ನಡೆಯಿತು. ಗೋವಾ ಕೈವಲ್ಯ ಮಠಾಧೀಶರಾದ ಶ್ರೀ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್ ರವರು ದೇವಾಲಯದ ಎದುರು ಬಿಲ್ವ ಗಿಡಗಳನ್ನು ನೆಡುವುದರ ಮೂಲಕ ಚಾಲನೆ ನೀಡಿದರು.ನಂತರ ನದಿ ತೀರದಲ್ಲಿ ವೈಭವದ ಸ್ವಣಾ೯ರತಿ ಕಾಯ೯ ನಡೆಯಿತು.ಈ ಸಂದಭ೯ ಸ್ವಾಮೀಜಿಯವರು ಯೋಜನೆಯು ಅತ್ಯಂತ ಯಶಸ್ವಿಯಾಗಲೆಂದು ಆಶೀವ೯ಚನ ನೀಡಿದರು.
ಕಾಯ೯ಕ್ರಮದಲ್ಲಿ ಅಭಿಯಾನದ ಪ್ರಮುಖರಾದ ಡಾII ನಾರಾಯಣ ಶೆಣ್ಯ್ , ಪ್ರಭಾಕರ ಭಟ್ ದೇವಾಲಯದ ಆಡಳಿತ ಮಂಡಳಿಯ ಸದಸ್ಯರು ಭಾಗವಹಿಸಿದ್ದರು. ರಾಘವೇಂದ್ರ ಪ್ರಭು,ಕವಾ೯ಲು ನಿರೂಪಿಸಿದರು. 

ಸ್ವಣಾ೯ ನದಿಯ ಪಾವಿತ್ರ್ಯ ಮತ್ತು ಸ್ವಚ್ಚತೆಯನ್ನು ಕಾಪಾಡಲು ಈ ನದಿಯ ದಡದಲ್ಲಿ ಬದುಕುತ್ತಿರುವ , ಈ ನದಿಯ ನೀರನ್ನು ಉಪಯೋಗಿಸುತ್ತಿರುವ ಜನರನ್ನು ಪ್ರೇರೇಪಿಸಿ ಅವರಲ್ಲಿ ಈ ಬಗ್ಗೆ ಜಾಗೃತಿ ಮಾಡುವುದು ಈ ಅಭಿಯಾನದ ಧ್ಯೇಯ.   ಅ. 2 ರಿಂದ ಪ್ರಾರಂಭವಾದ ಈ ಅಭಿಯಾನ.

   ಎಪ್ರಿಲ್ 13 ರ   ಸೌರಯುಗಾದಿಯಂದು  ಸಮಾರೋಪ ನಡೆಯುವುದು. ಅಭಿಯಾನದ ಪ್ರಮುಖ ಆಯಾಮಗಳಾದ ಸ್ವಚ್ಚತೆ, ನದೀತಟ ಪ್ರದೇಶದ ಹಸಿರೀಕರಣ, ವೃಕ್ಶಾರೋಪಣ, ಶಾಲಾಮಕ್ಕಳಿಗೆ ನದಿಯ ಬಗ್ಗೆ ರಸಪ್ರಶ್ನೆ, ಇಕೊಬ್ರಿಕ್ ತಯಾರಿಸಲು ತರಬೇತಿ , ಉಡುಪಿ ನಗರದಲ್ಲಿ ವಾರ್ಡ್ ಸ್ತರದಲ್ಲಿ ಹಸಿರೀಕರಣ, ಜಲ ಸಂರಕ್ಶಣೆ, ಸ್ವಚ್ಚತಾ ಕಾರ್ಯಕ್ರಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಸ್ವರ್ಣಾ ನದಿಯ ಮಹತ್ವ ಸಾರುವ ಪೊಸ್ಟರ್‍, ವೀಡಿಯೋಗಳಿಂದ ಜನಜಾಗ್ರತಿ. ಮಾಡುದಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.​
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!