ಬೆನ್ನು ಮೂಳೆ ಮುರಿತಕ್ಕೆ ಒಳಗಾದವರಿಗೆ ಮನೆಗೆ ಬಂದು ವ್ಯಾಕ್ಸಿನ್ ಕೊಡಿ – ವಿಜಯ್ ಕೊಡವೂರು

ಉಡುಪಿ: ಬೆನ್ನು ಮೂಳೆ ಮುರಿತಕ್ಕೆ ಒಳಗಾದವರು ದಿನ ನಿತ್ಯ ನೋವು ಸಹಿಸಿ ಕೊಳ್ಳುವವರು,ಅದರ ಜೊತೆಯಲ್ಲಿ ಬೇರೆ ಬೇರೆ ರೀತಿಯ ಸಮಸ್ಯೆ ಅವರಿಗೆ ಇರುತ್ತದೆ.ಹೃದಯ ಸಂಬಂಧಿ ಕಾಯಿಲೆ ಇರಬಹುದು,ಮೂತ್ರ ಕೋಶದ ಕಾಯಿಲೆ ಇರಬಹುದು, ಜೀರ್ಣಾಂಗ ವ್ಯವಸ್ಥೆ ಸರಿ ಇಲ್ಲದೆ ಇರಬಹುದು ಆದ್ದರಿಂದ ಅವರ ಮನೆಗೆ ಹೋಗಿ ಲಸಿಕೆ ನೀಡುವಂತೆ ಕೊಡವೂರು ವಾರ್ಡ್ ನಗರ ಸಭಾ ಸದಸ್ಯ ಹಾಗೂ ಸೇವಾ ಧಾಮ ಕನ್ಯಾಡಿ ನಿರ್ದೇಶಕ ವಿಜಯ್ ಕೊಡವೂರು ಮನವಿ ಮಾಡಿದರು.

ಬಿಪಿ ಶುಗರ್ ಅಂತಹ ಅನೇಕ ಸಮಸ್ಯೆ ಅವರನ್ನು ಸುತ್ತು ಕೊಂಡಿದೆ.ಆದರಿಂದ ಅವರನ್ನು ನಾವು ಈ ಕೋರೋನ ರೋಗದ ದಿನಗಳಲ್ಲಿ ಬೇರೆ ಜನರೊಂದಿಗೆ ಒಟ್ಟು ಮಾಡಿ ಲಸಿಕೆ ಕೊಡುವುದು ಸೂಕ್ತ ವಲ್ಲ, ಬೇರೆ ಅವರ ಸೋಂಕು ಇವರಿಗೆ ಬಂದರೆ ಜೀವ ಉಳಿಸಿಕೊಳ್ಳುವುದು ಕಷ್ಟ ಸಾಧ್ಯ ಅದರಿಂದ ಇವರನ್ನು ಲಸಿಕೆ ಕೇಂದ್ರಕ್ಕೆ ಕರಿಯುವುದರ ಬದಲು ಅವರ ಮನೆಗೆ ಹೋಗಿ ಲಸಿಕೆ ನೀಡಿದರೆ ಸೂಕ್ತ. ಆ ಮುಖಾಂತರ ಅವರ ಜೀವ ಉಳಿಸಬೇಕೆಂದು ಉಡುಪಿಯ ಜಿಲ್ಲಾ ಅಧಿಕಾರಿ ಜಗದೀಶ್ ಗೆ ಸೇವಾ ಧಾಮ ಕನ್ಯಾಡಿ ( ಬೆನ್ನು ಮೂಳೆ ಮುರಿತಕ್ಕೆ ಒಳಗಾದವರ ಪುನಃ ಚೇತನ ಕಾರ್ಯ ) ನಿರ್ದೇಶಕ ವಿಜಯ್ ಕೊಡವೂರು ಮನವಿ ಮಾಡಿದರು.

ಇದು ಒಳ್ಳೆಯ ಸಲಹೆ ಇದಕ್ಕೆ ಸೂಕ್ತ ವ್ಯವಸ್ಥೆ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

 
 
 
 
 
 
 
 
 
 
 

Leave a Reply