30 ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ಸೊಂಕು

ಬೆಳಗಾವಿ : ಶಾಲೆ ಆರಂಭದ ​ಬಗ್ಗೆ ಚಿಂತನೆ ನಡೆಸುತ್ತಿರುವ ​ರಾಜ್ಯ ಸರ್ಕಾರಕ್ಕೆ ಬಿಗ್ ಶಾಕ್ ಎದುರಾ ಗಿದ್ದು, ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಎಂ. ತಿಮ್ಮಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 30 ವಿದ್ಯಾರ್ಥಿಗಳಿಗೆ ಶುಕ್ರವಾರ ಕೊರೊನಾ ವೈರಸ್ ಸೊಂಕು. ಶಾಲೆಯಲ್ಲಿ ಪಾಠ ಮಾಡಿದ 6 ಜನ ಶಿಕ್ಷಕರಿಗೂ ಕೊರೊನಾ ವೈರಸ್ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. 

 
ಸೋಂಕು ದೃಢಪಟ್ಟ ಕಾರಣ 30 ವಿದ್ಯಾರ್ಥಿಗಳಿಗೆ ಮನೆಯಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.​ ಪಾಠ ಮಾಡಲು ಬಂದಿದ್ದ ಶಿಕ್ಷಕರನ್ನು ಗ್ರಾಮಸ್ಥರು ಊರಿನಿಂದ ಹೊರಗಿಟ್ಟಿದ್ದಾರೆ. ಶಿಕ್ಷಕರು ಸೇರಿದಂತೆ ಗ್ರಾಮಕ್ಕೆ ಯಾರೂ ಕೂಡ ಬರದಂತೆ ನಿಷೇಧ ಕೂಡ ಹೇರಿದ್ದಾರೆ. ಈ ಶಾಲೆಯಲ್ಲಿ ಒಟ್ಟು 191 ವಿದ್ಯಾರ್ಥಿಗಳಿದ್ದು, ಅದರಲ್ಲಿ 30 ವಿದ್ಯಾರ್ಥಿ ಗಳಿಗೆ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಶಾಲೆಯನ್ನು ಬಂದ್ ಮಾಡಲಾಗಿದೆ.​​
 
 
 
 
 
 
 
 
 

Leave a Reply