ಶಿರೂರು: ಕರೋನಾ ಜನ ಜಾಗೃತಿ ಸಮಾವೇಶ

ಶಿರೂರು : ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರಿನಲ್ಲಿ ಮುಸ್ಲಿಂ ಜಮಾತುಗಳ ಅಧ್ಯಕ್ಷರ, ಕಾರ್ಯದರ್ಶಿಯವರ ಹಾಗೂ ಮೌಲಾನಾರಿಗೆ ಕರೋನಾ ಜನ ಜಾಗೃತಿ ಸಮಾವೇಶ ನಡೆಯಿತು. 

ಈ ಸಂದರ್ಭದಲ್ಲಿ ಸಮುದಾಯದ ನಡುವೆ ಕರೋನಾದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹಾಗೂ ಅದಕ್ಕೆ ಪರಿಹಾರ ನೀಡುವ ಕುರಿತು ಹಿರಿಯ ವೈದ್ಯಾಧಿಕಾರಿ ಡಾ. ಪ್ರೇಮಾನಂದ ವಿವರವಾಗಿ ತಿಳಿ ಹೇಳುತ್ತಾ ಇದಕ್ಕೆ ಆದಷ್ಟು ಬೇಗ ಪರಿಹಾರ ಕಂಡು ಕೊಳ್ಳಲು ಮುಖಂಡರುಗಳಿಗೆ ಕರೆ ನೀಡಿದರು.

ಹಾಗೂ ಕೊವಿಡ್ ಸಂದರ್ಭದಲ್ಲಿ ಜೀವ ಹಾನಿ ಉಂಟಾದ ಬಗ್ಗೆ ಹಾಗೂ ಅದನ್ನು ವೈದ್ಯಾಧಿಕಾರಿಗಳು ನಿಭಾಯಿಸಿದ ರೀತಿಯನ್ನು ಸವಿವರವಾಗಿ ಹೇಳಿದರು. ಎಲ್ಲಾ ಧಾರ್ಮಿಕ ಮುಖಂಡರುಗಳ ಆದ್ಯತೆಯನ್ನು ಎತ್ತಿ ಹಿಡಿಯುತ್ತಾ, ಸಮಾಜದಲ್ಲಿ ಇದರ ಬಗ್ಗೆ ಅರಿವು ಮೂಡಿಸಲು ಒತ್ತಾಯಿಸಿದರು.

ಡಬ್ಲು ಎಚ್ ಒ ನ ಉಡುಪಿ ಕನ್ಸಲ್ಟೆಂಟ್ ಬಾ. ಅಶ್ವಿನ್ ಮಾತನಾಡುತ್ತಾ , ವ್ಯಾಕ್ಸೀನ್ ನ ಪ್ರಾಮುಖ್ಯತೆ ಹಾಗೂ ಅದರ ಅರಿವು ಮೂಡಿಸಿದರು. ಆಗುವಂತಹ ಅನಾಹುತವನ್ನು ತಡೆಯಬೇಕಾದರೆ ನಾವು ಇಂದೆ ಜಾಗೃತರಾಗಿ ಕಾರ್ಯಪ್ರವೃತ್ತರಾಗಲು ಮನವಿ ಮಾಡಿದರು.

 
 
 
 
 
 
 
 
 
 
 

Leave a Reply