Janardhan Kodavoor/ Team KaravaliXpress
23.6 C
Udupi
Friday, December 2, 2022
Sathyanatha Stores Brahmavara

ಜಿಲ್ಲೆಯ ಹೆಸರಾಂತ ಕಾಷ್ಠ ಶಿಲ್ಪಿ  ಉದ್ಯಾವರ ಯು.ಬಿ ಶ್ಯಾಮರಾಯ ಸಿ ಆಚಾರ್ಯ ನಿಧನ

ಉಡುಪಿ: ಜಿಲ್ಲೆಯ ಹೆಸರಾಂತ ಕಾಷ್ಠ ಶಿಲ್ಪಿ  ಉದ್ಯಾವರ ಯು.ಬಿ ಶ್ಯಾಮರಾಯ ಸಿ ಆಚಾರ್ಯ (78) ಇವರು ಅಲ್ಪಕಾಲದ ಅಸೌಖ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು.

ಉಡುಪಿ ಜಿಲ್ಲೆಯ ಹಲವಾರು ದೇವಸ್ಥಾನ, ದೈವಸ್ಥಾನಗಳ ಕಾಷ್ಠ ಶಿಲ್ಪಗಳ ರಚನೆ, ರಥಗಳ ನಿರ್ಮಾಣ ಮತ್ತು ಹೆಬ್ಬಾಗಿಲು ನಿರ್ಮಾಣಗಳನ್ನು ಮಾಡಿರುವ ಇವರು ಉದ್ಯಾವರ, ಪಾಂಬೂರು, ಬಾರ್ಕೂರು ಚರ್ಚ್ ಗಳ ಮರದ ಕೆತ್ತನೆ ಕೆಲಸಗಳನ್ನೂ ಮಾಡಿರುತ್ತಾರೆ.

ಯಕ್ಷಗಾನದ ಪ್ರೇಮಿಯಾದ ಇವರು ತನ್ನೂರಿನಲ್ಲಿ ಹರಕೆಯ ಯಕ್ಷಗಾನ ಮೇಳವಾದ ಆದಿಶಕ್ತಿ ಯಕ್ಷಗಾನ ಕೃಪಾಪೋಷಿತಾ ಬಾಲಯಕ್ಷಗಾನ ಕಲಾ ಮಂಡಳಿ ಹುಟ್ಟುಹಾಕಿದ್ದರು. ಇವರ ಗರಡಿಯಲ್ಲಿ ನೂರಾರು ಬಾಲ‌ಕಲಾವಿದರಾಗಿ ಯಕ್ಷಗಾನ ಕಲಿತಿದ್ದಾರೆ.

ಮಾತ್ರವಲ್ಲದೆ ಭಜನೆ ತಂಡಗಳನ್ನು ಕೂಡ ರಚಿಸಿದ್ದರು. 

ಮೃತರು ಪತ್ನಿ, ಮೂರು ಪುತ್ರರು ಓರ್ವ ಪುತ್ರಿಯರನ್ನು ಅಗಲಿದ್ದಾರೆ.

ಇವರ ಅಂತ್ಯಕ್ರಿಯೆ ಸೋಮವಾರ ಸೆ. 26 ರಂದು ಬೆಳಿಗ್ಗೆ 11 ಘಂಟೆಗೆ ಉದ್ಯಾವರದ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!