ಉದ್ಯಾವರ ಎಸ್.ಡಿ. ಎಂನಲ್ಲಿ   ವೈದ್ಯರಿಗಾಗಿ ಆರು ದಿನಗಳ ರಕ್ತ ಪ್ರದೂಷಜ ವ್ಯಾಧಿ ಎಂಬ ಬಗ್ಗೆ ವೈಜ್ಞಾನಿಕ ಕಾರ್ಯಾಗಾರ

ಶ್ರೀ ಧರ್ಮಸ್ಥಳ ಮ೦ಜುನಾಥೇಶ್ವರ ಆಯುರ್ವೇದ ಕಾಲೇಜಿನ ಕಾಯಚಿಕಿತ್ಸಾ ಮತ್ತು ಮಾನಸ ರೋಗ ವಿಭಾಗ ಹಾಗೂ ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠ, ಆಯುಷ್ ಮಂತ್ರಾ ಲಯ, ಭಾರತ ಸರಕಾರ, ಹೊಸ ದೆಹಲಿ ಇವರ ಜಂಟಿ ಸಹಭಾಗಿತ್ವದಲ್ಲಿ ಆಯುಷ್ ಆಯುರ್ವೇದ ವೈದ್ಯ ರಿಗಾಗಿ ಆರು ದಿನಗಳ ರಕ್ತ ಪ್ರದೂಷಜ ವ್ಯಾಧಿ ಎಂಬ ವೈಜ್ಞಾನಿಕ ಕಾರ್ಯಗಾರ ಉದ್ಘಾಟನಾ ಸಮಾರಂಭವು ಸೋಮವಾರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಲ್ಲಿ ಜರುಗಿತು.
ಪ್ರಾಯೋಗಿಕವಾಗಿ ವೈದ್ಯಕೀಯ ವೃತ್ತಿಯಲ್ಲಿ ಕಾಣುವ ಸಮಸ್ಯೆಗಳಿಗೆ ಪರ್ಯಾಯವನ್ನು ಕಂಡು ಕೊಳ್ಳುವುದು, ವರ್ತಮಾನಗನುಗುಣವಾಗಿ ತಮ್ಮಲ್ಲಿರುವ ವೈದ್ಯಕೀಯ ಜ್ಞಾನವನ್ನು ವೃದ್ಧಿಸಿ ಕೊಳ್ಳುವುದು, ವೈದ್ಯಕೀಯ ರಂಗದಲ್ಲಿ ಮಾಹಿತಿ ತಂತ್ರಜ್ಞಾನದ ಸದ್ಭಳಕೆ, ವೈದ್ಯಕೀಯ ವೈಜ್ಞಾನಿಕ ಪತ್ರಿಕೆಗಳ ಮಾಹಿತಿ ಇತ್ಯಾದಿ ಕಾರ್ಯಾಗಾರದ ಉದ್ದೇಶವಾಗಿದ್ದು, ಈ ಕಾರ್ಯಾ ಗಾರವು ಮಾರ್ಚ್ 1 ರಿಂದ 6ರವರೆಗೆ ನಡೆಯಲಿದೆ. ರಾಜ್ಯ ಹಾಗೂ ಹೊರ ರಾಜ್ಯಗಳಿಂದ 30 ಮಂದಿ ಆಯುಷ್ ಆಯುರ್ವೇದ ವೈದ್ಯರು ಈ ಕಾರ್ಯಗಾರದ ಫಲಾನುಭವಿಗಳಾಗಿದ್ದು, ಸುಮಾರು 12 ಮಂದಿ ನುರಿತ ಆಯುರ್ವೇದ ತಜ್ಞರಿಂದ 24 ವೈಜ್ಞಾನಿಕ ಕಾರ್ಯಗಾರಗಳು 6 ದಿನಗಳವರೆಗೆ ನಡೆಯಲಿದೆ.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಡಾ. ತಿರುನಾವುಕ್ಕರಸು, ಸಹಾಯಕ ಪ್ರಾಧ್ಯಾಪಕರು, ಸರಕಾರಿ ಆಯುರ್ವೇದ ಕಾಲೇಜು, ನಾಗರಕೊಯಿಲ್, ತಮಿಳುನಾಡು, ಅಧ್ಯಕ್ಷರಾಗಿ ಡಾ. ಮಮತಾ ಕೆ.ವಿ., ವೈದ್ಯಕೀಯ ಅಧೀಕ್ಷಕರು ಹಾಗೂ ಪ್ರಭಾರ ಪ್ರಾಂಶು ಪಾಲರು, ಎಸ್.ಡಿ.ಎಮ್. ಆಯುರ್ವೇದ ಕಾಲೇಜು, ಕುತ್ಪಾಡಿ, ಉಡುಪಿ, ಸ್ನಾತಕೋತ್ತರ ವಿಭಾಗದ ಸಹಾಯಕ ಮುಖ್ಯಸ್ಥ ಡಾ. ನಾಗರಾಜ ಎಸ್., ಸಹಾಯಕ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ. ವೀರಕುಮಾರ ಕೆ., ಮುಖ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಕಾಯ ಚಿಕಿತ್ಸಾ ಹಾಗೂ ಮಾನಸ ರೋಗ ವಿಭಾಗದ ಮುಖ್ಯಸ್ಥೆ ಡಾ. ಶ್ರೀಲತಾ ಕಾಮತ್ ಟಿ., ಸಂಘಟನಾ ಕಾರ್ಯದರ್ಶಿ ಹಾಗೂ ಸಹ ಪ್ರಾಧ್ಯಾಪಕ ಡಾ. ವಿಜಯೇಂದ್ರ ಭಟ್‌ರವರು ಕರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಹಾಯಕ ಪ್ರಾಧ್ಯಾಪಕರಾದ ಡಾ. ಅನಿರುದ್ಧ ಸರಳಾಯ ಸ್ವಾಗತಿಸಿದರು.  ಸಹಾಯಕ ಪ್ರಾಧ್ಯಾಪಕ ಡಾ. ಶೈಲೇಶ್ ವೈ ಪ್ರಸ್ತಾಪಿಸಿದರು.  
ಸಹಾಯಕ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ಡಾ. ವೀರ ಕುಮಾರ ಕೆ. ವಂದಿಸಿದರು. ಡಾ. ಸ್ವಾತಿ ನಿರೂಪಿಸಿದರು. ಈ ಸಂದರ್ಭದಲ್ಲಿ ದಿವಂಗತರಾದ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ಶ್ರೀನಿವಾಸ ಆಚಾರ್ಯರವರಿಗೆ ಶೃದ್ಧಾಂಜಲಿ ನಮನವನ್ನೂ ಸಲ್ಲಿಸಲಾಯಿತು.
 
 
 
 
 
 
 
 
 
 
 

Leave a Reply