ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಉಡುಪಿಯ ಸ್ವಸ್ಥವೃತ್ತ ಸ್ನಾತಕೋತ್ತರ ವಿಭಾಗ ವತಿಯಿಂದ ಅತಿಥಿ ಉಪನ್ಯಾಸ ಕಾರ್ಯಕ್ರಮ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಉಡುಪಿಯ ಸ್ವಸ್ಥವೃತ್ತ ಸ್ನಾತಕೋತ್ತರ ವಿಭಾಗ ವತಿಯಿಂದ ಅತಿಥಿ ಉಪನ್ಯಾಸ ಕಾರ್ಯಕ್ರಮವನ್ನು ​ಮಂಗಳವಾರದಂದು  ಆಯೋಜಿಸಲಾಯಿತು. 

ಮುಖ್ಯ ಅತಿಥಿಯಾದ ಡಾ. ರಾಮಚಂದ್ರ ಕಾಮತ್, ಪ್ರಾಧ್ಯಾಪಕರು ಹಾಗೂ ವಿಭಾಗ ಮುಖ್ಯಸ್ಥರು, ಕಮ್ಯೂನಿಟಿ ಮೆಡಿಸಿನ್, ಕೊಡಗು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಮಡಿಕೇರಿ ಅವರು ’ವಿಪತ್ತು ನಿರ್ವಹಣೆ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. 
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಮಮತಾ ಕೆ.ವಿ. ಅಧ್ಯಕ್ಷತೆ ವಹಿಸಿದ್ದರು. ಸ್ವಸ್ಥವೃತ್ತ ವಿಭಾಗದ ಮುಖ್ಯಸ್ಥರಾದ ಡಾ. ವಿಜಯ್ ಬಿ. ನೆಗಳೂರು ಹಾಗೂ ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಡಾ. ಅಶೋಕ್ ಕುಮಾರ್ ಬಿ.ಎನ್. ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
 
 ಡಾ.ಕೃತಿ ಅಮೈ, ಸಹಾಯಕ ಪ್ರಾಧ್ಯಾಪಕರು, ಸ್ವಸ್ಥವೃತ್ತ ವಿಭಾಗ ಇವರು ಸ್ವಾಗತಿಸಿದರು. ಡಾ. ಶ್ರೀನಿಧಿ ಧನ್ಯ ಬಿ.ಎಸ್., ಸಹಾಯಕ ಪ್ರಾಧ್ಯಾಪಕರು, ಸ್ವಸ್ಥವೃತ್ತ ವಿಭಾಗ ಇವರು ವಂದಿಸಿದರು. ಕಾರ್ಯಕ್ರಮದಲ್ಲಿ ಡಾ. ಯೋಗೀಶ ಆಚಾರ್ಯ, ಡಾ. ಸಂದೇಶ್ ಕುಮಾರ್ ಶೆಟ್ಟಿ, ಸಹ ಪ್ರಾಧ್ಯಾಪಕರು, ಸ್ವಸ್ಥವೃತ್ತ ವಿಭಾಗ ಇವರು ಉಪಸ್ಥಿತರಿದ್ದರು. ಡಾ. ಅಪರ್ಣಾ ಕಾರ್ಯಕ್ರಮ ನಿರೂಪಿಸಿದರು.  ​​​​
 
 
 
 
 
 
 
 
 
 
 

Leave a Reply