ಎಸ್.ಡಿ.ಎಮ್. ಆಯುರ್ವೇದ ಕಾಲೇಜು ಯುವ ರೆಡ್‌ಕ್ರಾಸ್ ವಿಭಾಗದ​ ಅತ್ಯುನ್ನತ ಸಾಧನೆ

ವಿಶ್ವ ಏಡ್ಸ್ ದಿನಾಚರಣೆ​~ ಜಾಥಾ ಮತ್ತು ಜಾಗೃತಿ ಕಾರ್ಯಕ್ರಮದ.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ​ ಮಹಾವಿದ್ಯಾಲಯದ ರೆಡ್‌ಕ್ರಾಸ್ ಮತ್ತು ಎನ್.ಎಸ್.ಎಸ್. ಘಟಕ, ಉದ್ಯಾವರ, ಇವರು​ ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್, ಉಡುಪಿ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ​ ತಡೆಗಟ್ಟುವ ಘಟಕ, ಉಡುಪಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ,​ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ ಮತ್ತು ನಾಗರಿಕ​ ಸಹಾಯವಾಣಿ ಕೇಂದ್ರ, ಉಡುಪಿ ಉದ್ಭವ ಶೈಕ್ಷಣಿಕ ಮತ್ತು​ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಬೆಂಗಳೂರು, ಜಿಲ್ಲಾ ಆಸ್ಪತ್ರೆ, ಉಡುಪಿ ಇದರ ಜಂಟಿ​ ಆಶ್ರಯದಲ್ಲಿ ​​ರಂದು ವಿಶ್ವ ಏಡ್ಸ್ ದಿನ – ೨೦೨೦ ರ​ ಆಚರಣೆಯನ್ವಯ ನೆರವೇರಿದ ಜಾಥಾ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಿದರು.


ಶ್ರೀಮತಿ ಕಾವೇರಿ, ಮಾನ್ಯ ಹಿರಿಯ ಸಿವಿಲ್ ನ್ಯಾಯಾಧೀಶರಿಂದ ಉದ್ಘಾಟಿಸಲ್ಪಟ್ಟ​ ಜಾಥಾವು ನಗರದ ಸರ್ವಿಸ್ ಬಸ್ ನಿಲ್ದಾಣದಿಂದ ಪ್ರಾರಂಭ​ಗೊಂಡು ಕೆ.ಎಮ್. ಮಾರ್ಗದ ಮೂಲಕ ಟೌನ್ ಹಾಲ್‌ವರೆಗೆ ಸಾಗಿ ಬಂತು.​ ಶ್ರೀ ಜಿ. ಜಗದೀಶ್ (ಭಾ.ಆ.ಸೇ), ಮಾನ್ಯ ಜಿಲ್ಲಾಧಿಕಾರಿಗಳು ಇವರಿಂದ​ ಉದ್ಘಾಟನೆ​ಗೊಂಡ ಸಭಾ ಕಾರ್ಯಕ್ರಮವು ಡಾ. ನವೀನ್ ಭಟ್ (ಭಾ.ಆ.ಸೇ),​ ಮಾನ್ಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್, ಉಡುಪಿ​ ಇವರ ಘನ ಅಧ್ಯಕ್ಷತೆಯಲ್ಲಿ ನೆರವೇರಿತು.

ಡಾ. ಸುಧೀರ್‌ಚಂದ್ರ ಸೂಡ, ಆರೋಗ್ಯ ಮತ್ತು ಕುಟುಂಬ​ ಕಲ್ಯಾಣಾಧಿಕಾರಿಗಳು, ಉಡುಪಿ, ಡಾ. ಮಧುಸೂಧನ್ ನಾಯಕ್, ಜಿಲ್ಲಾ ಸರ್ಜನ್,​ ಉಡುಪಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.​ ಯುವ ರೆಡ್‌ಕ್ರಾಸ್ ಮತ್ತು ​ರಾಷ್ಟ್ರೀಯ ಸೇವಾ ಯೋಜನೆ ಇದರ​ ಸುಮಾರು ೬೫ ಉತ್ಸಾಹಿ ಸದಸ್ಯರು ಏಡ್ಸ್ ಬಗ್ಗೆ ಫಲಕಗಳನ್ನು ಪ್ರದರ್ಶಿಸುತ್ತ​ ಜನರಲ್ಲಿ ಜಾಗೃತಿ ಮೂಡಿಸುತ್ತಾ ಮೆರವಣಿಗೆಯಲ್ಲಿ ಭಾಗವಹಿಸಿದರು.​ 
 
ಎಸ್.ಡಿ.ಎಮ್ ಮಹಾವಿದ್ಯಾಲಯದ ಕೆಂಪು ರಿಬ್ಬನ್ ಕ್ಲಬ್‌ನ ವತಿಯಿಂದ ೨೦೧೯-೨೦ ರ​​ ಶೈಕ್ಷಣಿಕ ವರ್ಷದಲ್ಲಿ ಅತ್ಯಧಿಕ ಯುನಿಟ್‌ಗಳ ರಕ್ತ ಸಂಗ್ರಹಣೆ ಮಾಡಿದ ​ಉತ್ಕೃಷ್ಟ ಸಾಧನೆಯನ್ನು ಮಾನ್ಯ ಜಿಲ್ಲಾಧಿಕಾರಿಯವರು ಪ್ರಶಂಶಿಸಿ ಯುವ​ ರೆಡ್‌ಕ್ರಾಸ್ ಸಂಚಾಲಕರಾಗಿರುವ ಡಾ. ಮೊಹಮ್ಮದ್ ಫೈಸಲ್‌ರವರನ್ನು​ ​ಅಭಿನಂದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.​​

ಕಾರ್ಯಕ್ರಮದ ಯಶಸ್ಸಿಗೆ ಯುವ ರೆಡ್‌ಕ್ರಾಸ್‌ನ್ ಅಧಿಕಾರಿಗಳಾದ ಡಾ.​ ಮೊಹಮ್ಮದ್ ಫೈಸಲ್ ಮತ್ತು ಸದಸ್ಯರಾದ ಡಾ. ತೇಜಸ್ವಿ ನಾಯ್ಕ್, ಡಾ. ಸುಶ್ಮಿತಾ ವಿ.ಎಸ್, ಎನ್.ಎಸ್.ಎಸ್. ಅಧಿಕಾರಿ ಡಾ. ವಿದ್ಯಾ​ಲಕ್ಷ್ಮೀ  ಕೆ. ಸದಸ್ಯ ರಾದ ಡಾ. ಶ್ರೀನಿಧಿ ಧನ್ಯ, ಡಾ.​ ಸಂದೇಶ್ ಕುಮಾರ್ ಮತ್ತಿತರರು ​ಉಪಸ್ಥಿತರಿದ್ದರು 
 
 
 
 
 
 
 
 
 
 
 

Leave a Reply