‘ಪ್ರಯೋಗಾಲಯ ಪರೀಕ್ಷೆಗಳ ಅಗತ್ಯತೆ’ ಕುರಿತು ಕಾರ್ಯಾಗಾರ

ಉಡುಪಿಯ ಎಸ್.ಡಿ.ಎಮ್. ಆಯುರ್ವೇದ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ  ಗುರುವಾರ ರೋಗ ನಿದಾನ ಮತ್ತು ವಿಕೃತಿ ವಿಜ್ಞಾನ ವಿಭಾಗದ ವತಿಯಿಂದ ‘ಪ್ರಯೋಗಾಲಯ ಪರೀಕ್ಷೆಗಳ ಅಗತ್ಯತೆ’ ಕುರಿತು ಕಾರ್ಯಾಗಾರ ನಡೆಸಲಾಯಿತು. 
 
ಕಾರ್ಯಕ್ರಮದಲ್ಲಿ ಪ್ರೊ. ಶಿವಾನಂದ್ ನಾಯಕ್, ಪ್ರಾಧ್ಯಾಪಕರು, ಜೀವರಾಸಾಯನಿಕ ವಿಭಾಗ, ಸುಬ್ಬಯ್ಯ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈಯನ್ಸ್, ಶಿವಮೊಗ್ಗ ಹಾಗೂ ನಿರ್ದೇಶಕರು, ಶಿವಾನಿ ಡಯಗ್ನೋಸ್ಟಿಕ್ಸ್ ಆ್ಯಂಡ್ ರಿಸರ್ಚ್ ಸೆಂಟರ್,ಉಡುಪಿಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ. ಅಧ್ಯಕ್ಷತೆ ವಹಿಸಿದ್ದರು. 
 
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಕರಾದ ಡಾ. ನಾಗರಾಜ್ ಎಸ್.ರವರು ಉಪಸ್ಥಿತರಿದ್ದರು. ಎಸ್‌ಡಿಎಮ್ ಸೆಂಟರ್ ಫಾರ್ ರಿಸರ್ಚ್ನ ಹಿರಿಯ ಸಂಶೋಧನಾ ಅಧಿಕಾರಿ ಶ್ರೀ ನವೀನಚಂದ್ರ ಎನ್.ಎಚ್. ಹಾಗೂ ರೋಗ ನಿದಾನ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಪ್ರಸನ್ನ ಎನ್. ಮೊಗಸಾಲೆಯವರು ಇವರನ್ನು ಸ್ವಾಗತಿಸಿದರು. ಪ್ರೊ. ಶಿವಾನಂದ್ ನಾಯಕ್‌ರವರು ‘ವಿವಿಧ ರೀತಿಯ ರೋಗ ಅಭಿವ್ಯಕ್ತಿಗಳಲ್ಲಿ ಪ್ರಯೋಗಾಲಯ ಪರೀಕ್ಷೆಗಳ ಪ್ರಾಮುಖ್ಯತೆ ಮತ್ತು ದಿನನಿತ್ಯದ ವೈದ್ಯಕೀಯ ಅಭ್ಯಾಸದಲ್ಲಿ ಪ್ರಯೋಗಾಲಯ ಪರೀಕ್ಷೆಗಳ ಅನ್ವಯ’ ಎಂಬ ವಿಷಯದ ಕುರಿತು ಮಾಹಿತಿ ನೀಡಿದರು.
 
 ಕಾರ್ಯಕ್ರಮದ ಕೊನೆಯಲ್ಲಿ ಸಂಕ್ಷಿಪ್ತ ಪ್ರಶ್ನೋತ್ತರ ಅಧಿವೇಶನ ನಡೆದಿದ್ದು, ಸ್ನಾತಕೋತ್ತರ ವಿದ್ಯಾರ್ಥಿಗಳು ಅತಿಥಿ ಭಾಷಣಕಾರರೊಂದಿಗೆ ಉತ್ಸಾಹದಿಂದ ಸಂವಹ ನನಡೆಸಿದರು. ಕಾರ್ಯಕ್ರಮದಲ್ಲಿ ಅತಿಥಿ ಭಾಷಣಕಾರ ರನ್ನು ಸನ್ಮಾನಿಸುವ ಮೂಲಕ ಅಧಿವೇಶನವನ್ನು ಮುಕ್ತಾಯಗೊಳಿಸಿದರು. 
 
ಸಂಸ್ಥೆಯ ಬೋಧಕ ಸಿಬ್ಬಂದಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ. ಕಾರ್ತಿಕಾ ಹಾಗೂ ಡಾ. ಪಲ್ಲವಿ ಕಾರ್ಯಕ್ರಮ ನಿರೂಪಿಸಿ, ಡಾ. ಅಭಿತಾ ಪ್ರಾರ್ಥಿಸಿ, ಡಾ. ಅಕ್ಷತಾ ವಂದಿಸಿದರು. ಕಾರ್ಯಕ್ರಮವನ್ನು ರೋಗನಿದಾನ ಮತ್ತು ವಿಕೃತಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅರುಣ್ ಕುಮಾರ್ ಎಮ್, ಸಹಾಯಕ ಪ್ರಾಧ್ಯಾಪಕಿ ಡಾ. ಸರಿತಾ ಟಿ. ಹಾಗೂ ಸಹಾಯಕ ಪ್ರಾಧ್ಯಾಪಕ ಡಾ. ಸದಾನಂದ ಭಟ್ ಅವರು ಸಂಯೋಜಿಸಿದರು.

 
 
 
 
 
 
 
 
 
 
 

Leave a Reply