Janardhan Kodavoor/ Team KaravaliXpress
26 C
Udupi
Monday, May 17, 2021

ಉದ್ಯಾವರ ಎಸ್ ಡಿ ಎಂ ನಲ್ಲಿ ಮಂಗಳೂರು ವಲಯ ಮಟ್ಟದ ರಸಪ್ರಶ್ನೆ 

ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು ಇದರ ರಜತ ಮಹೋತ್ಸವದ ಅಂಗವಾಗಿ ಶ್ರೀ ಧರ್ಮಸ್ಥಳ  ಮಂಜುನಾಥೇಶ್ವರ ಆಯುರ್ವೇದ  ಮಹಾವಿದ್ಯಾಲಯ ಉಡುಪಿ ಮತ್ತು ಶಾರದಾ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಮಂಗಳೂರು ಜಂಟಿ ಸಹಭಾಗಿತ್ವದಲ್ಲಿ ಸ್ನಾತಕ, ಕಿರು ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ​ಸೋಮವಾರ ಶ್ರೀ ದರ್ಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯ  ಉಡುಪಿಯ ಭಾವಪ್ರಕಾಶ ಸಭಾಂಗಣದಲ್ಲಿ ಮಂಗಳೂರು ವಲಯ ಮಟ್ಟದ ರಸಪ್ರಶ್ನೆ  ಆಯೋಜಿಸಲಾಗಿತ್ತು. 
ಈ ರಸ ಪ್ರಶ್ನೆಯ ಪ್ರಯುಕ್ತ ಆಯೋಜಿಸಲ್ಪಟ್ಟ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ರವಿಗಣೇಶ್ ಮೊಗ್ರಾ, ಪ್ರಾಂಶುಪಾಲರು, ಶಾರದಾ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಮಂಗಳೂರು ಇವರು ಮಾತನಾಡಿ ಇಂತಹ ರಸಪ್ರಶ್ನೆ ವಿದ್ಯಾರ್ಥಿಗಳಲ್ಲಿ  ಆಯುರ್ವೇದ ಓದುವ ಹುಮ್ಮಸ್ಸನ್ನು ಹೆಚ್ಚಿಸುತ್ತದೆ ಅಲ್ಲದೇ ಆಯುರ್ವೇದ ಬೆಳವಣಿಗೆಗೂ ಸಹಕಾರಿಯಾಗಲಿದೆ ಎಂದು ಹೇಳಿದರು. 
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಡಾ.ಮಮತಾ ಕೆ.ವಿ., ಪ್ರಾಂಶುಪಾಲರು, ಶ್ರೀಧರ್ಮಸ್ಥಳ  ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಉಡುಪಿ ಇವರು ಮಾತನಾಡಿ ರಸಪ್ರಶ್ನೆಯಂತಹ ವಿದ್ಯಾರ್ಥಿಗಳ ಜ್ಞಾನಭಂಡಾರವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುವುದಲ್ಲದೇ ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು  ಭಾಗವಹಿಸುವುದರಿಂದ ಜ್ಞಾನ ವಿನಿಮಯಕ್ಕೆ ಉಪಕಾರಿಯಾಗುತ್ತದೆ ಎಂದು ತಿಳಿಸಿದರು. 
ಡಾ| ನಾಗರಾಜ ಎಸ್, ಉಪಾಧ್ಯಕ್ಷರು ಸ್ನಾತಕೋತ್ತರ ವಿಭಾಗ ಶುಭ ಹಾರೈಸಿದರು. ಕಾರ‍್ಯಕ್ರಮದಲ್ಲಿ ಡಾ| ಅಜಂತ, ಮುಖ್ಯಸ್ಥರು, ರೋಗನಿದಾನ ವಿಭಾಗ, ಶಾರದಾ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಡಾ| ಶ್ರೀಕಾಂತ್ ಪಿ. ಎಚ್. ಮುಖ್ಯಸ್ಥರು ಸಂಹಿತ ಮತ್ತು ಸಿದ್ಧಾಂತ ವಿಭಾಗ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
ಡಾ|ರವಿ ಕೆ. ವಿ. ಉಪನ್ಯಾಸಕರು ಕರ‍್ಯಕ್ರಮ ನಿರೂಪಿಸಿದರು. ಡಾ|ಯೋಗೀಶ ಆಚರ‍್ಯ ಉಪ ಪ್ರಾಧ್ಯಾಪಕರು ಸ್ವಾಗತಿಸಿದರು. ಡಾ|ರ‍್ಹಂತ್ ಕುಮಾರ್ ಉಪ ಪ್ರಾಧ್ಯಾಪಕರು ವಂದಿಸಿದರು. ಡಾ| ಪರೀಕ್ಷಿತ್ ಉಪನ್ಯಾಸಕರು, ಶಾರದಾ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಇವರು ಉಪಸ್ಥಿತರಿದ್ದರು. ಡಾ| ಸಂದೇಶ ಕುಮಾರ್ ಶೆಟ್ಟಿ ಉಪ ಪ್ರಾಧ್ಯಾಪಕರು , ಡಾ| ಶ್ರೀನಿಧಿ ಧನ್ಯ ಉಪನ್ಯಾಸಕರು ಹಾಗೂ ಡಾ|ಅರುಣ್ ಕುಮಾರ್ ಉಪನ್ಯಾಸಕರು ಇವರು ರಸಪ್ರಶ್ನೆ ಸ್ರ‍್ಧೆಯನ್ನು ನೆರವೇರಿಸಿ ಕೊಟ್ಟರು. 
ಸ್ನಾತಕ ಮತ್ತು ಕಿರುವೈದ್ಯರ ವಿಭಾಗದಲ್ಲಿ ಶಾರದಾ  ಆಯುರ್ವೇದ  ಕಾಲೇಜು ಮತ್ತು ಆಸ್ಪತ್ರೆ ಮಂಗಳೂರಿನ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಶ್ರೀಧರ್ಮಸ್ಥಳ  ಮಂಜುನಾಥೇಶ್ವರ  ಆಯುರ್ವೇದ  ಮಹಾ ವಿದ್ಯಾಲಯ, ಹಾಸನದ ವಿದ್ಯರ‍್ಥಿಗಳು ಮುಂದಿನ ಸುತ್ತಿಗೆ ಮಂಗಳೂರು ವಲಯ ಮಟ್ಟದಿಂದ ಆಯ್ಕೆಯಾದರು. ಸ್ನಾತಕ ವಿಭಾಗದಲ್ಲಿ 9 ಕಾಲೇಜಿನ ವಿದ್ಯರ‍್ಥಿಗಳು ಮತ್ತು ಸ್ನಾತಕೋತ್ತರ ವಿಭಾಗದಲ್ಲಿ 5ಕಾಲೇಜಿನ ವಿದ್ಯಾರ್ಥಿಗಳು ರಸಪ್ರಶ್ನೆಯಲ್ಲಿ ಭಾಗವಹಿಸಿದ್ದರು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಸೋದೆ, ಶಿರೂರು ಉಭಯ ಶ್ರೀಗಳಿಂದ ಪಲಿಮಾರು ಮೂಲ ಮಠಕ್ಕೆ ಭೇಟಿ 

ಶೀರೂರು ಮಠಕ್ಕೆ ಪಟ್ಟಾಭಿಷಿಕ್ತರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಸೋದೆ ಶ್ರೀವಿಶ್ವ ವಲ್ಲಭ ತೀರ್ಥರ ಜೊತೆಯಾಗಿ ಪಲಿಮಾರು ಮೂಲಮಠಕ್ಕೆ ಭೇಟಿ ನೀಡಿ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಗೆ ಹಾಗೂ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರಿಗೆ...

ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯುತ್ತಿದೆ ಪ್ರಗತಿಕಾರ್ಯ

ಉಡುಪಿ: ಜಿಲ್ಲೆಯ ಶಿವಳ್ಳಿ ಗ್ರಾಮದ ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಕೆಲವು ನವೀಕರಣ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದು ಮೊದಲ ಹಂತದಲ್ಲಿ ಶ್ರೀ ಮಹಾಗಣಪತಿಯ ಗುಡಿ ತೀರ್ಥಮಂಟಪಗಳನ್ನು ನೂತನವಾಗಿ ನಿರ್ಮಿಸಲಾಗುತ್ತಿದೆ .‌ ಸೀಮಿತ ಅವಧಿಯೊಳಗೆ ಕಾರ್ಯಗಳನ್ನು...

​ಕಾಪು ಸಮುದ್ರ ಮಧ್ಯೆ ಸಿಲುಕಿಕೊಂಡಿರುವ 9 ಕಾರ್ಮಿಕರ ರಕ್ಷಣೆಗೆ ಪ್ರಧಾನಿ, ರಕ್ಷಣಾ ಸಚಿವರಿಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮನವಿ

ಭಾರತ ಸರಕಾರದ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಮತ್ತು ಗೌರವಾನ್ವಿತ ಪ್ರಧಾನಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರೇ, ಉಡುಪಿ ಜಿಲ್ಲೆಯ ಕಾಪು ಸಮುದ್ರ ತೀರದಿಂದ ಸಮುದ್ರದ ಮಧ್ಯದಲ್ಲಿ ಈ ಬಡಪಾಯಿ ಕಾರ್ಮಿಕರು ಸಿಕ್ಕಿಬಿದ್ದಿರುತ್ತಾರೆ, ಸಮುದ್ರ...

ಹೋಪ್ ಇಂಡಿಯಾ ಫೌಂಡೇಶನ್​ ವತಿಯಿಂದ ​ಕೊರೋನಾ ಮುಕ್ತ ಉಡುಪಿ ನಿರ್ಮಾಣ​ ಪಣ ​  ​​

ಉಡುಪಿ ಬೋರ್ಡ್ ಹೈಸ್ಕೂ​ನಲ್ಲಿ  ಆಶ್ರಯ ಪಡೆದಿರುವ ಭಿಕ್ಷುಕರು, ನಿರ್ಗತಿಕರು ಹಾಗೂ ಹೊರ ಜಿಲ್ಲೆಗಳಿಂದ ಬಂದಿರುವ ವಲಸೆ ಕಾರ್ಮಿಕರಲ್ಲಿ ಹೆಚ್ಚಿನವರಿಗೆ ಕೊರೋನಾ ಸೋಂಕು ತಗಲಿರುವ ಬಗ್ಗೆ ಸಂಶಯವಿದ್ದು ಅವರಿಂದ ಉಳಿದ ಸಾರ್ವಜನಿಕರಿಗೆ ಹರಡುವುದನ್ನು ತಪ್ಪಿಸಿ ಕೊರೋನಾ...
error: Content is protected !!