ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಇರ್ವತೂರಿನ ಸಂತೋಷ್ ದೇವಾಡಿಗ ಇವರ ಮಗಳು ಕುಮಾರಿ ಸನ್ವಿತ ದೇವಾಡಿಗ 5 ವರ್ಷದ ಬಾಲಕಿಯಾಗಿದ್ದು ಕಳೆದ 10 ದಿನಗಳಿಂದ ಜ್ವರ ಬಂದ ಕಾರಣ ಸ್ಥಳೀಯ ವೈದ್ಯರನ್ನು ಸಂಪರ್ಕಿಸಿರುತ್ತಾರೆ.
ಆಕೆಯನ್ನು ಪರೀಕ್ಷಿಸಿದ ವೈದ್ಯರು ಆಕೆಯನ್ನು, ಕೆಎಂಸಿ ಮಣಿಪಾಲ್‌ನ ಪೀಡಿಯಾಟ್ರಿಕ್ ಹೆಮಟಾಲಜಿ ಮತ್ತು ಆಂಕೊಲಾಜಿ ವಿಭಾಗಕ್ಕೆ ಹೋಗುವಂತೆ ಸೂಚಿಸಿದ್ದು, ಆಕೆಯ ತಪಾಸಣೆ ನಡೆಸಿದಾಗ ಆಕೆಗೆ ಬಿ-ಅಕ್ಯೂಟ್ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ ಹೆಸರಿನ ಒಂದು ವಿಧದ ರಕ್ತದ ಕ್ಯಾನ್ಸರ್ ಇರುವುದು ತಿಳಿದು ಬಂದಿದ್ದು ಮತ್ತು ಅವಳು ಬೇಗನೆ ಕೀಮೋಥೆರಪಿಗೆ ಒಳಗಾಗಬೇಕಾಗಿದ್ದು ಚಿಕಿತ್ಸೆ ನೀಡಲಾ ಗುತ್ತಿದೆ .
ವೈದ್ಯರ ಪ್ರಕಾರ ಸನ್ವಿತಳಿಗೆ ಎರಡೂವರೆ ವರ್ಷಗಳವರೆಗೆ ಚಿಕಿತ್ಸೆಯ ಅಗತ್ಯವಿರುತ್ತದೆ. ಆಕೆಯ ಚಿಕಿತ್ಸೆಯ ವೆಚ್ಚ ಸುಮಾರು ರೂ. 6 ಲಕ್ಷ ಆಗಲಿದೆ. ಆಕೆಯ ತಂದೆ ಕಾರ್ಕಳದಲ್ಲಿ ಜೆಸಿಬಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಗ್ರಹಿಣಿಯಾಗಿದ್ದು 5 ಮತ್ತು 3 ವರ್ಷ ವಯಸ್ಸಿನ ಇಬ್ಬರು ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿ ಇದ್ದಾರೆ. ಮಗುವಿನ ಖಾಯಿಲೆ ಇಡೀ ಕುಟುಂಬಕ್ಕೆಆಘಾತ ತಂದಿದೆ.
ಸರ್ಕಾರಿ ಯೋಜನೆಗೆ ಕುಟುಂಬವು ಅರ್ಹತೆ ಹೊಂದಿರದ ಕಾರಣ, ಸನ್ವಿತಳಿಗೆ ಚಿಕಿತ್ಸೆಯ ಆರ್ಥಿಕ ಸಹಾಯಕ್ಕಾಗಿ ಕೆಎಂಸಿ ಮಣಿಪಾಲ್ ಆಸ್ಪತ್ರೆಯಿಂದ ರೂ.2 ,55,000 ವನ್ನು(ಸೇವ್ ಲೈಫ್ ಚಾರಿ ಟೇಬಲ್ ಟ್ರಸ್ಟ್, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಫಂಡ್, ಮತ್ತು ಸರಕಾರೇತರ ಸಂಸ್ಥೆ) ಒದಗಿಸಿದ್ದು, ಇನ್ನು ಆಕೆಗೆ ಹೆಚ್ಚುವರಿ ರೂ.3,45,000 ಗಳ ಅಗತ್ಯವಿದ್ದು, ಚಿಕಿತ್ಸೆಯನ್ನು ಮುಂದುವರಿಸಲು ಆರ್ಥಿಕ ಸಹಾಯಕ್ಕಾಗಿ ಈ ಕುಟುಂಬ ದಾನಿಗಳ ಮೊರೆ ಹೋಗಿದ್ದಾರೆ.
ದಯವಿಟ್ಟು ಮಗುವಿನ ಚಿಕಿತ್ಸೆಗೆ ದಾನಿಗಳು ಸಹಾಯ ಮಾಡಿ ಮಗುವಿನ ಹೊಸ ಜೀವನಕ್ಕೆ ಸಹಕರಿಸುವಂತೆ ಸಾರ್ವಜನಿಕರ ಬೆಂಬಲಕ್ಕಾಗಿ ಎದುರು ನೋಡುತ್ತಿದೆ. ದಯವಿಟ್ಟು ಸಹಕರಿಸಿ. ಆಸಕ್ತ ದಾನಿಗಳು ಮಗುವಿನ ತಾಯಿ ಅಮಿತ ಹೆಸರಿನಲ್ಲಿರುವ ಕಾರ್ಪರೇಷನ್ ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ ಸಂತೋಷ್ ದೇವಾಡಿಗ ವಿನಂತಿಸಿದ್ದಾರೆ
ಖಾತೆ ಸಂಖ್ಯೆ: 520191063617973
IFSC CODE: CORP0000148
ಕಾರ್ಕಳ ಶಾಖೆ. ಮೊಬೈಲ್ ಸಂಖ್ಯೆ: 87220 28379, 81974 76622
ಕಾರ್ಕಳ ಶಾಖೆ. ಮೊಬೈಲ್ ಸಂಖ್ಯೆ: 87220 28379, 81974 76622