ಸಾಣೂರು : ಉಚಿತ ಆರೋಗ್ಯ ತಪಾಸಣಾ ಶಿಬಿರ

ಬಂಟರ ಯಾನೆ ನಾಡವರ ಸಂಘ ಸಾಣೂರು ಇವರ ಆಶ್ರಯದಲ್ಲಿ ಡಾ| ಟಿ. ಎಂ. ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ದಿನಾಂಕ 24/09/2023 ನೇ ರವಿವಾರ ಬೆಳಿಗ್ಗೆ 9.00 ರಿಂದ 12.30 ರವರೆಗೆ ಸಾಣೂರು ಶಿವರಾಮ ರೈ ಕಲಾ ವೇದಿಕೆಯಲ್ಲಿ ನಡೆಯಲಿದೆ ಈ ಶಿಬಿರದಲ್ಲಿ ಸಾಮಾನ್ಯ ರೋಗ ವಿಭಾಗ ( ಬಿ. ಪಿ ಮತ್ತು ಮಧು ಮೇಹ) ಹೃದಯ ರೋಗ ತಪಾಸಣೆ ಕಿವಿ, ಮೂಗು, ಗಂಟಲು, ಮೂಳೆ ಮತ್ತು ಕೀಲು ಹಾಗೂ ಕಣ್ಣಿನ ತಪಾಸಣೆ ನಡೆಯಲಿದೆ ಕನ್ನಡಕದ ಅಗತ್ಯ ಇರುವವರಿಗೆ ಕನ್ನಡಕವನ್ನು ಉಚಿತವಾಗಿ ನೀಡಲಾಗುವುದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕಾಗಿ ಬಂಟರ ಯಾನೆ ನಾಡವರ ಸಂಘ ಸಾಣೂರು ಇವರ ಪ್ರಕಟಣೆ ತಿಳಿಸಿದೆ.

Leave a Reply